ಕಲ್ಪ ಮೀಡಿಯಾ ಹೌಸ್ | ಧಾರವಾಡ |
“ಉತ್ತರದ ಸಿಂಹ” Uttarada Simha ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ, ಮಾಜಿ ಯೋಧ ರುದ್ರಪ್ಪ ಚಿನಿವಾಲ, ಮೂರ್ತಿ ಮಾಳದ್ಕರ, ನಿರ್ಮಾಪಕ ವೀರನಗೌಡ ಸಿದ್ಧಾಪೂರ, ಚಿತ್ರದ ನಾಯಕ ನಟ ಕಿರಣ ಸಿದ್ಧಾಪೂರ ಮತ್ತು ಚಿತ್ರ ನಿರ್ದೇಶಕ ರಾಹುಲ್ ದತ್ತಪ್ರಸಾದ ಚಿತ್ರತಂಡದ ಮೊದಲಾದವರು ಪಾಲ್ಗೊಂಡಿದ್ದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಚಿತ್ರಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಹುಲ್‌ರು -ಇಡೀ ಚಿತ್ರ ಪರಂಪರೆ ಮತ್ತು ಪ್ರಕೃತಿಯ ವಿಶೇಷಣಗಳನ್ನು ವಿವರಿಸುವಂತದ್ದಾಗಿದೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆ ಜೊತೆಗೆ ಚಿತ್ರದ ಕಥಾವಸ್ತು ಅಷ್ಟೇ ಸೂಕ್ಷ್ಮವಾಗಿದ್ದು ಅನೇಕ ತಿರುವುಗಳನ್ನು ಹೊಂದಿದೆ. ಧರ್ಮವೀರ ಡಾ.ಕಲ್ಮೇಶ ಹಾವೇರಿಪೇಟ್ ಅವರ ಶುಭಹಾರೈಕೆಗಳೊಂದಿಗೆ ಚಿತ್ರನಿರ್ಮಾಣವನ್ನು ಸಿದ್ದಾಪುರ ಸಹೋದರರು ಮಾಡುತ್ತಿದ್ದಾರೆ ಎಂದರು. ಕನಸು, ಹೆಜ್ಜೆ ಹೆಜ್ಜೆಗೂ ಧಾರಾವಾಹಿ ಮತ್ತು ಮೂಕಗುರು, ವಿದ್ಯಾಸಾಗರ ಮಕ್ಕಳ ಚಿತ್ರಗಳ ನಿರ್ದೇಶಕರಾಗಿರುವ ಮತ್ತು ಪ್ರೇಮ ಪೂಜೆ, ಹೊಳಲಮ್ಮ ದೇವಿ ಮಹಾತ್ಮೆ, ಜಗಜ್ಯೋತಿ ಬಸವೇಶ್ವರ, ಶ್ರೀಗಂಧ ಚಲನಚಿತ್ರಗಳ ಛಾಯಾಗ್ರಾಹಕ , ಉತ್ತಮ ಛಾಯಾಗ್ರಾಹಕ “ಗಲಾಂಟಿ” ಮರಾಠಿ ಕಲಾತ್ಮಕ ಚಿತ್ರಕ್ಕೆ ಪೂನಾ ಇಂಟರ್ನ್ಯಾಷನಲ್ ಫಿಲ್ಮ್ ದಲ್ಲಿ ಪ್ರಶಸ್ತಿ ಪಡೆದ ರಾಹುಲ್ ದತ್ತಪ್ರಸಾದ ಕಥೆ, ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ , ಚಿತ್ರಕಥೆ ಮತ್ತು ಸಂಭಾಷಣೆ ರಂಗಭೂಮಿಯ ಎಲ್,ಆರ್,ಬೂದಿಹಾಳ , ಸಂಗೀತ ಶಿವಶಂಕರ ಕೊಣ್ಣೂರ , ಯುವಕವಿ ವಿನಾಯಕ ಕಲ್ಲೂರರ ಗೀತರಚನೆ , ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ , ಡಾ.ವೀರೇಶ ಹಂಡಗಿ ಅವರದಿದೆ.
Also read: ಜನರಲ್ಲಿ ಇ-ತ್ಯಾಜ್ಯದ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳು ಅಗತ್ಯ
ತಾರಾಗಣದಲ್ಲಿ ರಂಗಭೂಮಿಯ ಕಲಾವಿದರು ಹಾಗೂ ಕಿರುತೆರೆ, ಹಿರಿತೆರೆ ಕಲಾವಿದರಿದ್ದು ಮುಖ್ಯ ಭೂಮಿಕೆಯಲ್ಲಿ ನಾಯಕ ನಟನಾಗಿ ಕಿರಣ ಸಿದ್ದಾಪುರ ಕಾಣಿಸಲಿದ್ದಾರೆ, ವೀರನಗೌಡ ಸಿದ್ದಾಪುರ, ಪ್ರಭು ಹಂಚಿನಾಳ, ಕೃಷ್ಣಪ್ರಿಯಾ, ರಾಜೀವ್ ಸಿಂಗ್, ಬಾಬಾಜಾನ ದರೂರ, ಆನಂದ ಜೋಶಿ, ರಾಜು ಗಡ್ಡಿ ಅವರ ಜೊತೆಗೆ ಇನ್ನೂ ಕೆಲವು ಪಾತ್ರಗಳಿಗೆ ಸೂಕ್ತ ಕಲಾವಿದರ ಆಯ್ಕೆ ನಡೆದಿದೆ. ಈ ಚಿತ್ರಕ್ಕೆ ಅರವಿಂದ ಮುಳಗುಂದ, ರಮೇಶ ಹಿರೇರೆಡ್ಡಿ ಮತ್ತು ಅನೀಸ ಬಾರೂದವಾಲೆ ಸಹಕಾರವಿದೆ.
ವರದಿ: ಡಾ.ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post