ಕಲ್ಪ ಮೀಡಿಯಾ ಹೌಸ್ | ಧಾರವಾಡ |
ದೇಶದಲ್ಲಿ ವಿಧಿ ವಿಜ್ಞಾನ ಕೇತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ತಿಳಿಸಿದರು.
ಅವರು ಇಂದು ಕೃಷಿ ವಿಶ್ವವಿದ್ಯಾಲಯದ ಆವರಣಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್‍ಗೆ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಪರಾಧಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ದೇಶದ ನೀತಿಗಳಲ್ಲಿಯೂ ಬದಲಾವಣೆ ತರುವ ಅವಶ್ಯಕತೆಯಿದೆ. ತನಿಖೆಯು ವಿಧಿ ವಿಜ್ಞಾನದ ಆಧಾರದಲ್ಲಿ ನಡೆಯಬೇಕಿದೆ. ಅಪರಾಧ ನಡೆದ ಸ್ಥಳಗಳಲ್ಲಿ ತಕ್ಷಣವೇ ವಿಧಿ ವಿಜ್ಞಾನ ಅಧಿಕಾರಿಗಳನ್ನು ಭೇಟಿ ನೀಡುವಲ್ಲಿ ಕರ್ನಾಟಕ ಹಾಗೂ ದೆಹಲಿ ಮುಂಚೂಣಿ ಸ್ಥಾನದಲ್ಲಿವೆ. ಆರು ವರ್ಷಗಳ ಹೆಚ್ಚಿನ ಶಿಕ್ಷೆ ಆಗುವ ಅಪರಾಧಗಳಲ್ಲಿ ವಿಧಿ ವಿಜ್ಞಾನ ತನಿಖೆ ಕಡ್ಡಾಯವಾಗಿದೆ. ಕಾನೂನು ವ್ಯವಸ್ಥೆಯಲ್ಲಿ ತನಿಖೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ನ್ಯಾಯದಾನ ಕ್ಷೇತ್ರದಲ್ಲಿ ವಿಧಿ ವಿಜ್ಞಾನಗಳ ಸಾಕ್ಷಾಧಾರಗಳನ್ನು ಕಡ್ಡಾಯವಾಗಿ ಪರಿಗಣಿಸುವ ನಿಟ್ಟಿನಲ್ಲಿ ದೇಶದ ಐಪಿಸಿ-ಸಿಆರ್‍ಪಿಸಿಗಳಲ್ಲಿ ಬದಲಾವಣೆ ತರಲಾಗುವುದೆಂದರು.

ಈ ವಿಶ್ವವಿದ್ಯಾಲಯದ ಯುವಕರಿಗೆ ಉದ್ಯೋಗ ನೀಡಲಿದೆ. ಹಾಗೂ ಅಪರಾಧಗಳನ್ನು ಕಡಿಮೆಗೊಳಿಸಲು ಉತ್ತಮ ಕಾರ್ಯ ನಿರ್ವಹಿಸಲಿದೆ. ದೇಶದಲ್ಲಿ 10 ಸಾವಿರ ಪರಿಣಿತರನ್ನು ಉತ್ಪಾದಿಸಲಿವೆ. 70 ದೇಶಗಳ ಜೊತೆ 155 ಒಪ್ಪಂದ ಮಾಡಿಕೊಂಡಿದೆ. ರಾಷ್ಟ್ರೀಯ ಅಪರಾಧ ಮಾಹಿತಿ ಬ್ಯೂರೊದಲ್ಲಿ ಒಂದುವರೆ ಕೋಟಿ ಅಪರಾಧಿಗಳ ಫಿಂಗರ್ ಪ್ರೀಂಟಿಂಗ್ ದಾಖಲಿಸಲಾಗಿದೆ. ಅಪರಾಧಿಗಳನ್ನು ತಕ್ಷಣವೆ ಪತ್ತೆ ಹಚ್ಚಲು ಉಪಯೋಗವಾಗಲಿದೆ. ವೈಜ್ಞಾನಿಕ ಪರಿಣಿತಿ, ಸಂಶೋಧನಾ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.

ಕರ್ನಾಟಕ ನೀತಿಗಳಲ್ಲಿ ಆಧುನಿಕ ವಿಧಿ ವಿಜ್ಞಾನವು ಹೆಚ್ಚು ಬಳಕೆಯಾಗುತ್ತಿದೆ. ಬೆಂಗಳೂರಿನಲ್ಲಿ 30 ಕೋಟಿ ವೆಚ್ಚದಲ್ಲಿ ರಾಜ್ಯ ನ್ಯಾಯ ವಿಜ್ಞಾನ ಆಧುನಿಕ ಸೌಲಭ್ಯವುಳ್ಳ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದರಲ್ಲಿ 300 ಪರಿಣಿತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಕೆಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಸಚಿವರಾಧ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಈ ವಿಧಿವಿಜ್ಞಾನ ಶೈಕ್ಷಣಿಕದಿಂದ ಉದ್ಯೋಗ ಖಚಿತವೆಂದರು. ಶೀಘ್ರದಲ್ಲೇ ತರಗತಿಗಳು ಆರಂಭವಾಗಲಿದ್ದು ಮುಂದಿನ ದಿನಗಳಲ್ಲಿ ವಿಶ್ವದರ್ಜೇಯ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಶೈಕ್ಷಣಿಕ ಕೇಂದ್ರವಾಗಿರುವ ಧಾರವಾಡದಲ್ಲಿ ಇದರಿಂದ ಶೈಕ್ಷಣಿಕ ಕ್ರಾಂತಿಯಾಗಲಿದೆ. ಅಪರಾಧ ಜಗತ್ತು ಹೆಚ್ಚೆಚ್ಚು ಬೆಳೆಯುತ್ತಿದೆ ಅಪರಾಧಿಗಳು ಹೊಸ ಹೊಸ ದಾರಿಗಳನ್ನು ಅನುಸರಿಸುತ್ತಿದ್ದಾರೆ ಆದ್ದರಿಂದ ನಮ್ಮ ನೀತಿ ಕಾನೂನುಗಳನ್ನು ಸಹ ಹೆಚ್ಚೆಚ್ಚು ಶಕ್ತಿಯುತಗೊಳಿಸಬೇಕೆಂದರು.
Also read: ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ: ಜೈನ್ ಪಬ್ಲಿಕ್ ಶಾಲೆಯ ಮದಿಹ ಇಬ್ರಾಹಿಂಗೆ ಪ್ರಥಮ ಸ್ಥಾನ
ಗೃಹ ಸಚಿವರಾದ ಅರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ, ಶಾಸಕರಾದ ಅಮೃತ ದೇಸಾಯಿ ಅರವಿಂದ ಬೆಲ್ಲದ, ಪ್ರೋ. ಎಸ್.ವಿ.ಸಂಕನೂರ, ಮಹಾಪೌರ ಈರೇಶ ಅಂಚಟಗೇರಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ರಾಜ್ಯದಲ್ಲಿ ವಿಧಿ ವಿಜ್ಞಾನ ಕ್ಷೇತ್ರದಲ್ಲಾದ ಅಭಿವೃದ್ಧಿ ಬಗ್ಗೆ ವಿವರಿಸಿದರು. ಗುಜರಾತ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪದ್ಮಶ್ರೀ, ಡಾ.ಜೆ.ಎಂ.ವ್ಯಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಕುಲಸಚಿವ ಡಾ.ಸಿ.ಡಿ. ಜಡೇಜಾ ವಂದಿಸಿದರು.









Discussion about this post