ಶಿವಮೊಗ್ಗ: ನಗರದ ಸರ್ಕಾರಿ ಆರ್ಯುವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದಲೇ ಹಲವು ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದೆ.
ಕೋರ್ಸ್ ಆರಂಭಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅಕ್ಟೋಬರ್ ಮಾಹೆಯಿಂದ ಪ್ರಥಮ ವರ್ಷದ ತರಗತಿಗಳು ಆರಂಭವಾಗಲಿವೆ.
ಶಿವಮೊಗ್ಗದಲ್ಲಿ ಅತ್ಯಂತ ಸುಸಜ್ಜಿತ ಆರ್ಯುವೇದ ಆಸ್ಪತ್ರೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ನಿರಂತರ ಪ್ರಯತ್ನದಿಂದಾಗಿ ಆರಂಭಿಸಲಾಗಿತ್ತು. ಈಗ, ಕಾಲೇಜು ಮಂಜೂರಾಗಿ ಅಗತ್ಯ ಅನುದಾನವೂ ಸಹ ಬಿಡುಗಡೆಯಾಗಿದೆ.
ಸಾಗರ ರಸ್ತೆಯ ಪ್ರವಾಸಿ ಮಂದಿರದ ಎದುರಿಗೆ ಇರುವ ಆರ್ಯುವೇದಿಕ್ ಆಸ್ಪತ್ರೆ ಪಕ್ಕದಲ್ಲೇ ಸುಮಾರು 3 ಎಕರೆ ಪ್ರದೇಶದಲ್ಲಿ ಸುಮಾರು 4.60 ಕೋಟಿ ರೂ. ವೆಚ್ಚದಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದ್ದು, ಈಗಾಗಲೇ ಕೆಳ ಭಾಗದಲ್ಲಿ 16 ಕೊಠಡಿಗಳೂ ಸಿದ್ದವಾಗಿವೆ.
ಇನ್ನು, ಪ್ರಸ್ತುತ ಪ್ರಥಮ ವರ್ಷದ ಆರ್ಯುವೇದಿಕ್ ತರಗತಿ ನಡೆಸಲು ಪ್ರಾಂಶುಪಾಲರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ.
ಹಾಗೆಯೇ, ಆರ್ಯುವೇದಿಕ್ ಕಾಲೇಜಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರಿಯಾಗುವಂತೆ 60 ಹಾಸಿಗೆಯುಳ್ಳ ಆಸ್ಪತ್ರೆಯೂ ಇಲ್ಲಿದೆ.
Discussion about this post