ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ #RBI ದೇಶದ ವಿದೇಶಿ ವಿನಿಮಯ ಸಂಗ್ರಹದಿಂದ ಸುಮಾರು 12 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಮಾರಾಟ ಮಾಡಿದೆ ಎಂಬ ವರದಿ ತಪ್ಪು ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ #PIB ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಮಾಹಿತಿಯಲ್ಲಿ, ಬ್ಲೂಮ್ಬರ್ಗ್ ವರದಿಗೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ಈ ಸುದ್ದಿ ಅಧಿಕೃತ ಅಂಕಿಅಂಶಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಸಿದೆ.
Also Read>> ದೇವೇಗೌಡರ ಕಾಲು ಮುಟ್ಟಿ ಆರ್ಶೀವಾದ ಪಡೆದ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ ನಿವಾಸಕ್ಕೂ ಭೇಟಿ
RBI ಮಾಹಿತಿ ಪ್ರಕಾರ, ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ಹೆಚ್ಚುತ್ತಿದೆ. 2025ರ ಸೆಪ್ಟೆಂಬರ್‌ನಲ್ಲಿ 13.92% ಇದ್ದ ಚಿನ್ನದ ಪಾಲು, 2026ರ ಮೇ ವೇಳೆಗೆ 16.85%ಕ್ಕೆ ಏರಿಕೆಯಾಗಿದೆ.
ಇದಲ್ಲದೆ, ದೇಶದ ಚಿನ್ನದ ಭೌತಿಕ ಸಂಗ್ರಹ 880.52 ಮೆಟ್ರಿಕ್ ಟನ್ ಮಟ್ಟದಲ್ಲಿ ಸ್ಥಿರವಾಗಿದೆ. ಚಿನ್ನದ ಮೌಲ್ಯವೂ ಏರಿಕೆಯಾಗಿದ್ದು, 2026ರ ಏಪ್ರಿಲ್ ವೇಳೆಗೆ 120.24 ಬಿಲಿಯನ್ ಡಾಲರ್‌ಗೆ ತಲುಪಿದೆ.
ಭಾರತದ ಒಟ್ಟು ವಿದೇಶಿ ವಿನಿಮಯ ಸಂಗ್ರಹ 698.49 ಬಿಲಿಯನ್ ಡಾಲರ್ ಆಗಿದ್ದು, ಇದರಲ್ಲಿ ವಿದೇಶಿ ಕರೆನ್ಸಿ ಆಸ್ತಿಗಳು ಪ್ರಮುಖ ಪಾಲು ಹೊಂದಿವೆ.
ಅಧಿಕೃತ ಮಾಹಿತಿಗಾಗಿ RBI ಪ್ರಕಟಣೆಗಳನ್ನು ಮಾತ್ರ ನಂಬುವಂತೆ PIB ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್




















