ನವದೆಹಲಿ: ದೇಶದಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಸಂಸದರು ಹಾಗೂ ಶಾಸಕರನ್ನು ಆರೋಪ ಸಾಬೀತಾಗುವ ಮುನ್ನವೇ ಅನರ್ಹಗೊಳಿಸಬೇಕೇ ಬೇಡವೇ ಎಂಬ ಕುರಿತಾಗಿನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಲಿದೆ.
ಸದ್ಯ ಕ್ರಿಮಿನಲ್ ಕೇಸ್ ಗಳಲ್ಲಿ ಆರೋಪಿಗೆ ಶಿಕ್ಷೆ ಸಾಭಿತಾದ ನಂತರ ಮಾತ್ರ ಎಂಪಿಗಳು ಮತ್ತು ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಈಗಿನ ಕಾನೂನು ಅವಕಾಶ ನೀಡುತ್ತದೆ. ಆದರೆ, ಆರೋಪ ಸಾಬೀತಾಗುವ ಮುನ್ನವೇ ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಅಂತಿಮ ತೀರ್ಪು ಇಂದು ಹೊರಬೀಳಲಿದೆ.

















