ಬೆಂಗಳೂರು: ಹಿರಿಯ ನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದ ಬೆನ್ನಲ್ಲೇ ರಾಜ್ಯ ಜನರಲ್ಲಿ ಮನವಿ ಮಾಡಿರುವ ಸಿಎಂ, ಭಾವೋದ್ವೇಗಕ್ಕೆ ಒಳಗಾಗಿ ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ಕೋರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಹಾಗೂ ಟ್ವೀಟ್ ಮಾಡಿರುವ ಅವರು, ಖ್ಯಾತ ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಾರದು. ಯಾವುದೇ ಅತಿರೇಕದ ಹೆಜ್ಜೆಯಿಡಬಾರದು ಎಂದು ಮನವಿ ಮಾಡಿದ್ದಾರೆ.
ಖ್ಯಾತ ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಾರದು,ಯಾವುದೇ ಅತಿರೇಕದ ಹೆಜ್ಜೆಯಿಡಬಾರದು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
"ಅಂಬರೀಷ್ ಅವರ ನಿಧನ ಎಲ್ಲರಿಗೂ ದುಃಖದ ಸಂಗತಿ. ಅವರಿಗೆ ಗೌರವಪೂರ್ಣ ವಿದಾಯ ಹೇಳುವುದು ನಮ್ಮ ಕರ್ತವ್ಯ.ಆದ್ದರಿಂದ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗದಿರಿ" pic.twitter.com/PC4qJljFJD
— CM of Karnataka (@CMofKarnataka) November 25, 2018
ಅಂಬರೀಷ್ ಅವರ ನಿಧನ ಎಲ್ಲರಿಗೂ ದುಃಖದ ಸಂಗತಿ. ಅವರಿಗೆ ಗೌರವಪೂರ್ಣ ವಿದಾಯ ಹೇಳುವುದು ನಮ್ಮ ಕರ್ತವ್ಯ. ಆದ್ದರಿಂದ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗದಿರಿ ಎಂದು ಕೋರಿದ್ದಾರೆ.
ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಂಬರೀಶ್ ಅವರ ಸಾವಿನ ಸುದ್ದಿ ತಿಳಿದು ಅವರ ಅಪ್ಪಟ ಅಭಿಮಾನಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೊಟ್ಟೆ ಗೌಡನದೊಡ್ಡಿಯ ತಮ್ಮಯ್ಯ(55) ಎಂಬುವರು ದುಃಖ ತಾಳಲಾರದೆ 10.30ರ ಬೆಳಿಗ್ಗೆ ಸಮಯದಲ್ಲಿ ಇಂದು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ.
ಮಾಹಿತಿ: ಬೋರನಾಯಕ, ಮಂಡ್ಯ
Discussion about this post