ಅಲ್ಲರೀ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ,
ನೀವೇನು ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಸರ್ಕಾರ ನಡೆಸ್ತಿದಿರೋ ಅಥವಾ ದ್ವೇಷ ಹಾಗೂ ಅವಕಾಶವಾದಿ ರಾಜಕಾರಣದ ಕಾರ್ಖಾನೆ ನಡೆಸ್ತಿದಿರೋ?
ತೈಲ ಬೆಲೆ ಏರಿಕೆ ಅಂತ ಬಾಯಿ ಬಡ್ಕೊಂಡು, ನಾಳೆ ಕಾಂಗ್ರೆಸ್ ಹಾಗೂ ನಾಟಕ ಭಕ್ತ ಮಂಡಳಿ ಭಾರತ್ ಬಂದ್ ಕರೆ ಕೊಟ್ಟಿದೆ. ಆದರೆ, ಇದಕ್ಕೆ ದೇಶದಾದ್ಯಂತ ಸಾರ್ವಜನಿಕರೇ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಿಮ್ಮ ಸರ್ಕಾರ ಮಾಡುತ್ತಿರೋದೇನ್ರಿ?
ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡ್ತಾ ಇದಾರೆ ಅಂದ್ರೆ! ಏನ್ ಆಗ್ತಿದೆ ರಾಜ್ಯದಲ್ಲಿ…? ನೀವು ಯಾವ ಪಕ್ಷದವರಾದ್ರೂ ಆಗಿರಿ, ನೀವಿಗ ಸಂವಿಧಾನದತ್ತವಾಗಿ(?) ಸರ್ಕಾರ ನಡೆಸುತ್ತಾ, ಅಧಿಕಾರದಲ್ಲಿ ಕುಳಿತಿದ್ದೀರಿ? ಹೀಗಿರುವಾಗ, ದೇಶ ಹಾಗೂ ರಾಜ್ಯದ ವ್ಯವಸ್ಥೆಯನ್ನೇ ಅವ್ಯವಸ್ಥೆಗೆ ತಳ್ಳುವ ಹಾಗೂ ಸಾವಿರಾರು ಕೋಟಿ ರೂ. ನಷ್ಟ ಉಂಟು ಮಾಡುವ ರಾಜಕೀಯ ಪ್ರೇರಿತ ಬಂದ್‌ಗೆ ಈ ರೀತಿ ಸಾಥ್ ನೀಡುತ್ತೀರ ಎಂದರೆ ನಿಮ್ಮನ್ನ ಯಾವ ಪದಗಳಲ್ಲಿ ಜರಿಯಬೇಕು ನೀವೇ ಹೇಳಿ?
ಏನು ದೇಶ ಉದ್ದಾರ ಮಾಡೋಕೆ, ದೇಶ ಸೇವೆ ಮಾಡೋಕೆ ಬಂದ್‌ಗೆ ಕರೆ ನೀಡಿದ್ದಾರಾ? ಆತ್ಮಸಾಕ್ಷಿಯಾಗಿ ಹೇಳಿ, ಈ ಬಂದ್ ರಾಜಕೀಯ ಉದ್ದೇಶ ಹೊಂದಿಲ್ಲ ಎಂದು ನೋಡೋಣ…
ಮೆಕಾಲೆ ಎಂಬ ಅವಿವೇಕಿಯ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ದೇಶದ ಮೇಲೆ ಹೇರಿ, ಇಂದು ನಮ್ಮ ಸಂಸ್ಕೃತಿ ಹಾಗೂ ಮೂಲ ಶಿಕ್ಷಣ ವ್ಯವಸ್ಥೆ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಂದುವರೆದ ದೇಶಗಳ ಸಮಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ಪೈಪೋಟಿ ನೀಡಲು ನಿರಂತರ ಶ್ರಮ ಹಾಕಬೇಕಿದೆ.
ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪ್ರೇರಿತ ಬಂದ್‌ಗೆ ಜಿಲ್ಲಾಧಿಕಾರಿಗಳೇ ಅಧಿಕೃತವಾಗಿ ಘೋಷಣೆ ಮಾಡುತ್ತಾರೆ ಎಂದರೆ, ಅದಾವ ನೈತಿಕತೆ ಇಟ್ಟುಕೊಂಡು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತೀರಿ?
ವಿಚಾರದ ಬಗ್ಗೆ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರ ಪ್ರತಿಕ್ರಿಯೆ ಹೀಗಿದೆ ನೋಡಿ:
ಈಗಿನ ಪರಿಸ್ಥಿತಿ ನೋಡಿದರೆ ಮೋದಿಯವರು Emergency Declare ಮಾಡಬೇಕಾದೀತು. ಅಡ್ವಾಣಿ ಹಿಂದೊಮ್ಮೆ ಸೂಚನೆ ಕೊಟ್ಟಿದ್ರು. ಮೋದಿಯವರ ಯಾವ ನಡೆಯನ್ನೂ ವಿರೋಧಿಸುವ ಇವರು ಏನೂ ಮಾಡಬಹುದು. ಯಾವ ಬಂದ್ ಆದರೂ ಸರಕಾರ ಘೋಷಣೆ ಮಾಡುವುದು ತಪ್ಪಾಗುತ್ತದೆ.ಗಲಾಟೆಗಳಾದರೆ ಯಾರು ಹೊಣೆ.ಜವಬ್ದಾರಿ ಇದೆಯಾ ಇವರಿಗೆ? ಸದನಗಳ ಚರ್ಚೆ ಯಾಕಿರುವುದು ಮತ್ತೆ?
ಸರಿ, ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಅಹಿತಕರ ಘಟನೆಗಳೇನಾದರೂ ನಡೆದರೆ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಮುಂದಾಲೋಚನೆಯಿಂದ ರಜೆ ನೀಡಿದ್ದೀರಿ ಎಂದುಕೊಳ್ಳೋಣ.
ಸ್ವಾಮಿ, ತಾವು ಮುಖ್ಯಮಂತ್ರಿಗಳು… ನಿಮ್ಮದೇ ಸರ್ಕಾರ… ರಾಜ್ಯದ ಇಡಿಯ ಭದ್ರತಾ ವ್ಯವಸ್ಥೆ ನಿಮ್ಮದೇ ಕೈಯಲ್ಲಿದೆ. ಹೀಗಿರುವಾಗ, ಯಾವನು ಏನಾದರೂ ಮಾಡಲಿ, ನಾನು ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಲು ಬಿಡುವುದಿಲ್ಲ, ಏನಾದರಾಗಲಿ ಭದ್ರತೆ ನೀಡುತ್ತೇನೆ ಎಂದು ಧೈರ್ಯದಿಂದ ನಿರ್ಣಯ ಕೈಗೊಳ್ಳುವ ತಾಕತ್ತು ನಿಮಗಿಲ್ಲವೇನ್ರಿ?
ಬಂದ್ ಅಲ್ಲದೇ ಇನ್ನಾವುದೇ ಮಾನವ ನಿರ್ಮಿತ ಪರಿಸ್ಥಿತಿ ಎದುರಾದರೂ ರಾಜ್ಯದ ಜನತೆಯ ರಕ್ಷಣೆಗೆ ನಾವಿದ್ದೇವೆ, ದೈನಂದಿನ ಆಡಳಿತ ಹಾಗೂ ವ್ಯವಸ್ಥೆಯಲ್ಲಿ ಬದಲಾವಣೆಯಿಲ್ಲ ಎಂದು ಹೇಳುವ ತಾಕತ್ತು ನಿಮಗಿಲ್ಲ ಎಂದರೆ ರಾಜೀನಾಮೆ ಬಿಸಾಕಿ ಮನೆ ಹೋಗಿ… ಅದನ್ನು ಬಿಟ್ಟು ನಿಮ್ಮ ಕೀಳು ರಾಜಕೀಯಕ್ಕೆ ರಾಜ್ಯವನ್ನು ಬಲಿ ಕೊಡಬೇಡಿ…
ನಿಜ, 37 ಸ್ಥಾನ ಪಡೆದು ಕಾಂಗ್ರೆಸ್ಸಿನ ಹಂಗಿನಲ್ಲಿ ಮುಖ್ಯಮಂತ್ರಿಯಾದವರಲ್ಲವೇ ನೀವು? ಅದು ಹೇಗೆ ಕಾಂಗ್ರೆಸ್ ವಿರುದ್ಧವೇ ನಿರ್ಣಯ ಕೈಗೊಳ್ಳಲು ಸಾಧ್ಯ ಅಲ್ಲವೇ? ನಾಚಿಕೆಯಾಗಬೇಕು ಕಣ್ರಿ ನಿಮ್ಮ ಸರ್ಕಾರಕ್ಕೆ….
ವಾ…! ಅದೆಷ್ಟು ಬುದ್ದಿವಂತಿಕೆಯಿಂದ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡದೇ, ಜಿಲ್ಲಾಧಿಕಾರಿಗಳ ಮೂಲಕ ಮುಂಜಾಗ್ರತಾ ಕ್ರಮವಾಗಿ ಎಂಬ ಹಣೆ ಪಟ್ಟಿ ಹಚ್ಚಿ, ರಜೆ ಘೋಷಣೆ ಮಾಡುತ್ತೀರ ಎಂದರೆ ಎಂತಹ ನಟ ಭಯಂಕರ ಸರ್ಕಾರ ನಿಮ್ಮದು…
ನೆನಪಿಟ್ಟುಕೊಳ್ಳಿ… ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾಳಿನ ಬಂದ್‌ಗೆ ನಿಮ್ಮ ಸರ್ಕಾರ ಬೆಂಬಲ ಕೊಟ್ಟಿದೆ. ಇದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಇದನ್ನೆಲ್ಲಾ ಸರಿಯಾದ ಲೆಕ್ಕ ಇಟ್ಟು ಸರಿಯಾದ ಸಮಯದಲ್ಲಿ ಎಂತಹ ಪೆಟ್ಟು ನೀಡುತ್ತಾರೆ. ಐತಿಹಾಸಿಕ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಹೇಳ ಹೆಸರಿಲ್ಲದಂತೆ ದೇಶದ ಮೂಲೆ ಮೂಲೆಗಳಲ್ಲಿ ಭಾರತೀಯರು ಮೂಲೆಗುಂಪು ಮಾಡಿ, ಅಸ್ಥಿತ್ವಕ್ಕಾಗಿ ತಡಕಾಡುವಂತೆ ಮಾಡಿದ್ದಾರೆ. ಅಂತಹುದ್ದರಲ್ಲಿ ಯಾವುದೇ ಸಿದ್ದಾಂತ, ನೈತಿಕತೆ, ಬದ್ದತೆಯೇ ಇಲ್ಲ ನಿಮ್ಮ ಅಪ್ಪ ಮಕ್ಕಳ ಪಕ್ಷ ಯಾವ ಲೆಕ್ಕ…
ಮುಂದೊಂದು ದಿನ ನಿಮ್ಮ ಜೆಡಿಎಸ್‌ನಲ್ಲಿ ತೆನೆ ಹೊತ್ತ ಮಹಿಳೆ ಬಿಟ್ಟು ಬೇರೇನೂ ಉಳಿದಿರುವುದಿಲ್ಲ… ನೆನಪಿಟ್ಟುಕೊಳ್ಳಿ…
Discussion about this post