ಮೇಘಾಲಯ: ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 42 ಉಗ್ರರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ, ಉಗ್ರರಿಗೆ ಸಹಕಾರ ನೀಡುತ್ತಿರುವ ಕಾಶ್ಮೀರಿಗಳಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ನಿರ್ಬಂಧಿಸುವಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಾಶ್ಮೀರಿಗಳಿಗೆ ಎಲ್ಲ ಸರಕು ಸಾಗಣೆಯನ್ನು ನಿರ್ಬಂಧಿಸಬೇಕು. ಜನರು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಬಾರದು ಎಂದು ಕರೆ ನೀಡಿದ್ದಾರೆ.
ಕಾಶ್ಮೀರಿಗಳಿಗೆ ಎಲ್ಲವನ್ನೂ ಬಹಿಷ್ಕರಿಸಿ, ಕಾಶ್ಮೀರ ಮಾರುಕಟ್ಟೆ ಅಥವಾ ವ್ಯಾಪಾರಿಗಳಿಂದ ಯಾವುದೇ ಸರಕುಗಳನ್ನು ಕೊಳ್ಳಬೇಡಿ, ಮುಂದಿನ ಎರಡು ವರ್ಷಗಳ ಕಾಲ ಕಾಶ್ಮೀರ, ಪವಿತ್ರ ಹಿಂದೂ ಕ್ಷೇತ್ರ ಅಮರನಾಥಕ್ಕೆ ಹೋಗಬೇಡಿ ಎಂದು ಕರೆ ನೀಡಿದ್ದಾರೆ.







Discussion about this post