ಸಾಗರ: ನನ್ನನ್ನು ಒಮ್ಮೆ ಸಂಸತ್’ಗೆ ಆಯ್ಕೆ ಮಾಡಿ ಕಳುಹಿಸಿದರೆ ನೀವು ಅನುದಾನಕ್ಕಾಗಿ ಯಾರ ಮನೆಯ ಬಾಗಿಲನ್ನೂ ಕಾಯಬೇಕಿಲ್ಲ. ಬದಲಾಗಿ, ನಾನು ಅದನ್ನು ತರುತ್ತೇನೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭರವಸೆ ನೀಡಿದರು.
ಸಾಗರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ನಾನು ನಿಮ್ಮನ್ನ ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದರೂ ಕೂಡ ನನಗೆ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತಲೂ ಹೆಚ್ಚು ಮತವನ್ನ ನೀಡಿದ್ದೀರಿ. ಈ ಭಾಗದ ಜನರ ಮನಸ್ಸಿನಲ್ಲಿ ಕಾಗೋಡು ತಿಮ್ಮಪ್ಪ ನವರಿಗೆ ವಿಶೇಷ ಸ್ಥಾನವನ್ನು ನೀಡಿದ್ದೀರಾ. ಆ ಕಾರಣಕ್ಕೆ ನನಗೆ ನೀವು ಮತಗಳನ್ನ ನೀಡಿ ನನ್ನನ್ನ ಬೆಂಬಲಿಸಿದ್ದೀರಾ ಎಂದರು.
ನನಗೆ ಈ ಭಾಗದ ಸಮಸ್ಯೆಗಳ ಬಗ್ಗೆ ತಿಳಿದಿದೆ. ಈಗಿನ ಕೆಂದ್ರ ಸರ್ಕಾರ ಹಾಗೂ ಇಲ್ಲಿನ ಸಂಸದರು ಅರಣ್ಯ ಭೂಮಿಯನ್ನು ಉಳುಮೆ ಮಾಡುತ್ತಿರುವವರನ್ನ ಕಡೆಗಣಿಸಿದ್ದಾರೆ. ಈ ಭಾಗ ರೈತರು ಹಾಗೂ ಜನರ ಬಗ್ಗೆ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರಿಗೆ ವಿಶೇಷ ಕಾಳಜಿ ಇದೆ. ಅವರುಗಳು ನಿಮಗಾಗಿ ರೂಪಿಸಿರುವ ಯೋಜನೆಯನ್ನು ಸಹಕಾರಗೊಳಿಸಲು ಈ ಬಾರಿ ಚುನಾವಣೆ ಯಲ್ಲಿ ನೀವು ಬದಲಾವಣೆ ತರಬೇಕು. ಒಮ್ಮೆ ಈ ಬಾರಿ ನನಗೆ ಅವಕಾಶವನ್ನು ನೀಡಿದರೆ, ನಾನು ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ಇನ್ನು ನಾನು ಮೊದಲು ಹೋರಾಟ ಮಾಡಿದ್ದು ನನ್ನ ತಂದೆ ಸಮನಾದ ಕಾಗೋಡು ತಿಮ್ಮಪ್ಪನವರ ಜೊತೆ. ತಾಳಗುಪ್ಪದಿಂದ ಸಾಗರಕ್ಕೆ ಪಾದಯಾತ್ರೆ ಮಾಡಿದ್ದೆ. ಬಳಿಕ ನಾನು ಅರಣ್ಯ ಹಕ್ಕುಪತ್ರ ಹಾಗೂ ನೀರಾವರಿಗೆ 2 ಬಾರಿ ಸೊರಬದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡಿದ್ದೆ. ನಂತರ ಶಿವಮೊಗ್ಗದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕುಮಾರಸ್ವಾಮಿಯವರು ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಬಜೆಟ್’ನಲ್ಲಿ 482 ಕೋಟಿ ರೂ. ಹಾಗೂ ಸಿಎಂರವರ ವಿಶೇಷ ಅನುದಾನದಲ್ಲಿ 1600 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಜಿಲ್ಲೆ ನೀಡಿದ್ದಾರೆ ಎಂದರು.
ಮಧು ಬಂಗಾರಪ್ಪಗೆ ಬೆಳಗ್ಗೆಯಿಂದಲೂ ಪ್ರಚಾರಕ್ಕೆ ಸಾಥ್ ನೀಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬೇಳೋರು ಗೋಪಾಲಕೃಷ್ಣ. ತಲವಾಟ ತಾಲೂಕು ಪಂಚಾಯತ್ ಸದಸ್ಯೆ ಪ್ರಭಾವತಿ ಸೇರಿದಂತೆ ಹಲವು ಸ್ಥಳೀಯ ಚುನಾಯಿತ ಪ್ರತಿನಿಧಿಗಳು.. ಶ್ರೀನಿವಾಸ್ . ಮಾಜಿ ಎಂಎಲ್ ಸಿ ಪ್ರುಪುಲ್ ಮಧುಕರ ತಲವಾಟ ತಾಲೂಕು ಪಂಚಾಯತ್ ಸದಸ್ಯೆ ಪ್ರಭಾವತಿ ಸೇರಿದಂತೆ ಹಲವು ಸ್ಥಳೀಯ ಚುನಾಯಿತ ಪ್ರತಿನಿಧಿಗಳು..
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯ ಹಲವಾರು ಮುಖಂಡರುಗಳು ಮಾನ್ಯ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಮಧು ಬಂಗಾರಪ್ಪ ನಾಯಕತ್ವವನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
Discussion about this post