ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಹೆಣ್ಣು ಮಗಳು ಹುಟ್ಟಿನಿಂದ ಸಾಯುವವರೆಗೂ ಸಮಾಜದ ಸೃಷ್ಟಿಕರ್ತೆಯಾಗಿ ಸಮಾಜದ ಮಾದರಿ ಹೆಣ್ಣಾಗಿ, ಮನೆಗೆ ಬೆಳಕಾಗಿ, ಪೋಷಕರಿಗೆ ಒಳ್ಳೆಯ ಮಗಳಾಗಿ, ಸಹೋದರನಿಗೆ ಉತ್ತಮ ಸಹೋದರಿಯಾಗಿ ಮನೆಗೆ ಸೊಸೆಯಾಗಿ, ಕಾಳಜಿಯ ಪತಿಗೆ ಮುದ್ದಿನ ಹೆಂಡತಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ ಮತ್ತು ಮಕ್ಕಳ ಮೊದಲ ಗುರುವಾಗಿ ತನ್ನ ಜೀವನದ ಎಲ್ಲಾ ಹಂತದಲ್ಲೂ ತಾನು ಹೊತ್ತಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ.
ಹೆಣ್ಣು ಮಕ್ಕಳು ಪ್ರತಿಯೊಂದು ಉದ್ಯಮದಲ್ಲೂ ಮುಂದೆ ಬರುತ್ತಿರುವುದು ಸಂತೋಷದ ವಿಷಯ. ಆದರೆ, ಮಹಿಳೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಾಗಿ ಮೊರೆ ಹೋಗುತ್ತಾ ತನ್ನ ಎಲ್ಲಾ ಜವಾಬ್ದಾರಿಗಳನ್ನು ಮರೆಯುತ್ತಿರುವುದು ದುಃಖದ ಸಂಗತಿಯಾಗಿದೆ.

ನಮ್ಮ ಸಮಾಜದ ಪ್ರತಿಯೊಂದು ಜವಾಬ್ದಾರಿಯು ಗಂಡಸಿಗಿಂತ ಹೆಣ್ಣಿನ ಕೈಯಲ್ಲಿಯೇ ಹೆಚ್ಚಾಗಿ ಇದೆ ಎಂದು ಹೇಳಬಹುದು. ಹೆಣ್ಣುಮಕ್ಕಳು ಆಡುವ ನುಡಿ, ನಡೆದುಕೊಳ್ಳುವ ಸ್ವಭಾವದ ಮೇಲೆ ನಮ್ಮ ಸಮಾಜದ ಗೌರವ ನಿಂತಿದೆ. ಆದ್ದರಿಂದ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಅರ್ಥ ಗರ್ಭಿತ ವಿಷಯವನ್ನು ಪೋಸ್ಟ್ ಮಾಡುವುದು ಮತ್ತು ಅಷ್ಟೇ ಒಳ್ಳೆಯ ರೀತಿಯ ಭಾವ ಚಿತ್ರಗಳನ್ನು ಹಾಕುವುದು ನಿಮ್ಮ ನಿಮ್ಮ ಘನತೆಗೆ ಪ್ರಶಸ್ತಿ ಕೊಟ್ಟಂತೆ ಇರುತ್ತದೆ. ಅದರೊಂದಿಗೆ ಸಮಯಕ್ಕೂ ಬೆಲೆ ಕೊಟ್ಟು, ಗುರು ಹಿರಿಯರಿಗೆ ಗೌರವ ಕೊಟ್ಟು ಅವರನ್ನು ಉತ್ತಮವಾಗಿ ನಡೆಸಿಕೊಳ್ಳುವ, ಉತ್ತಮವಾಗಿ ಕಾಳಜಿ ತೋರಿಸುವ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕಿದೆ.

ಖಿನ್ನತೆಗೆ ಜಾರುವುದು ಬೇಡ. ದೇಶದ ಯಶಸ್ವಿ ಹೆಣ್ಣು ಮಗಳಾಗಿ ಬೆಳೆದುನಿಲ್ಲೋಣ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post