ಬೆಂಗಳೂರು: ಇಡಿಯ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿ, ದಾಖಲೆ ಬರೆದಿರುವ ಕೆಜಿಎಫ್ ಚಿತ್ರ, ಈಗ ಮತ್ತೊಂದು ದಾಖಲೆ ಸೃಷ್ಠಿಸಿದ್ದು, ಆಲ್ ಟೈಮ್ ರೆಕಾರ್ಡ್ ದಾಖಲಿಸಿದೆ.
ಭಾರತ ಮಾತ್ರವಲ್ಲದೇ, ಅಮೆರಿಕಾದಲ್ಲೂ ಬಿಡುಗಡೆಯಾಗಿರುವ ಕೆಜಿಎಫ್ ಬಿಡುಗಡೆಯಾದ ೫ನೆಯ ದಿನಕ್ಕೆ 4 ಲಕ್ಷ ಡಾಲರ್ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ದಲ್ಲಿ ದಾಖಲೆ ಬರೆದಿದೆ.
#KGF crosses $400K at the #USA Box Office..
$413,214 in 5 days..
All-Time No.1 Kannada Grosser in #USA
— Ramesh Bala (@rameshlaus) December 26, 2018
ಚಿತ್ರಕ್ಕೆ ಅಮೆರಿಕದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಅಮೆರಿಕದಲ್ಲಿ ೫ನೆಯ ದಿನಕ್ಕೆ ಕೆಜಿಎಫ್ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ಬರೊಬ್ಬರಿ 4 ಲಕ್ಷ ಡಾಲರ್ (2,79,,000) ಮೀರಿದೆ. ಈ ಮೂಲಕ ಕೆಜಿಎಫ್ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು ಅಮೆರಿಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೊಟ್ಟ ಮೊದಲ ಚಿತ್ರ ಎಂಬ ಕೀರ್ತಿಗೂ ಕೆಜಿಎಫ್ ಪಾತ್ರವಾಗಿದೆ.
ಈ ಹಿಂದೆ ಅಮೆರಿಕದಲ್ಲಿ ಅನೂಪ್ ಭಂಡಾರಿ ಅವರ ರಂಗಿತರಂಗ ಚಿತ್ರ 3.15,000 ಡಾಲರ್ ಗಳಿಕೆ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿತ್ತು. ಆದರೆ ಇದೀಗ ಈ ಚಿತ್ರದ ದಾಖಲೆಯನ್ನೂ ಕೂಡ ಕೆಜಿಎಫ್ ಮೀರಿ ನಿಂತಿದೆ.
Discussion about this post