ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ಕ್ರೀಡಾ ಕ್ಷೇತ್ರಕ್ಕೆ ಗರಿಷ್ಠ ಬೆಂಬಲ ನೀಡುತ್ತಿದ್ದು, ಇದೇ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನಿಟ್ಟಿರುವ ಕೇಂದ್ರ ಕ್ರೀಡಾ ವಿವಿಗೆ ರಾಷ್ಟ್ರಪತಿಗಳು ಅಸ್ತು ಎಂದಿದ್ದಾರೆ.
ದೇಶದ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ರಾಷ್ಟ್ರೀಯ ಕ್ರೀಡಾ ವಿವಿ ಮಸೂದೆ 2017ಕ್ಕೆ ಒಪ್ಪಿಗೆ ನೀಡಿತ್ತು. ಇದಕ್ಕೆ ಈಗ ರಾಷ್ಟ್ರಪತಿಗಳೂ ಸಹ ಅಂಕಿತ ಹಾಕಿದ್ದು, ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೀಡಾ ವಿವಿ ಸ್ಥಾಪನೆಯಾಗಲಿದೆ.
ಇನ್ನು, ಈ ವಿವಿ ಸ್ಥಾಪನೆಗೆ ಮಣಿಪುರದ ಪಶ್ಚಿಮ ಇಂಫಾಲದಲ್ಲಿರುವ ಕಟ್ರುಕ್ ನಲ್ಲಿ 325.90 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ.
ಕ್ರೀಡಾ ಶಿಕ್ಷಣವನ್ನು ದೇಶದಲ್ಲೆಡೆ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕಳೆದ ವರ್ಷ ಲೋಕಸಭೆಯಲ್ಲಿ ಈ ಬಿಲ್ ಅನ್ನು ಪರಿಚಯಿಸಲಾಗಿತ್ತು. ಇದು ಈಗ ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ನಿರ್ವಹಣೆ ಮತ್ತು ಕ್ರೀಡಾ ತರಬೇತಿ ಕ್ರೀಡಾ ಶಿಕ್ಷಣವನ್ನು ಉತ್ತೇಜಿಸಲು ವಿಶೇಷವಾದ ಕ್ರೀಡಾ ವಿಭಾಗಗಳಿಗೆ ರಾಷ್ಟ್ರೀಯ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಅತ್ಯುತ್ತಮ ಅಂತರ ರಾಷ್ಟ್ರೀಯ ಮಾದರಿಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ವಿಶ್ವವಿದ್ಯಾನಿಲಯವಾಗಿ ಕಾರ್ಯನಿರ್ವಹಿಸಲಿದೆ.
Discussion about this post