ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಇಡಿಯ ವಿಶ್ವದ ಗಮನ ಸೆಳೆದಿರುವ ಸುಮಾರು 69 ವರ್ಷಗಳ ಅಯೋಧ್ಯಾ ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣದ ಅಂತಿಮ ತೀರ್ಪು ಇಂದು ಹೊರಬೀಳಲಿದ್ದು, ದೇಶದಾದ್ಯಂತ ತೀವ್ರ ಕುತೂಹಲ ಮೂಡಿದೆ.
ಈ ಮೊದಲು ಇದೇ ತಿಂಗಳ 15ರ ನಂತರ ತೀರ್ಪು ಹೊರಬೀಳಲಿದೆ ಎಂದು ಹೇಳಲಾಗಿತ್ತು. ಆದರೆ, ನಿನ್ನೆ ರಾತ್ರಿ ಏಕಾಏಕಿ ಹೇಳಿಕೆ ಹೊರಬಿದ್ದಿದ್ದು, ಇಂದೇ ಅಂದರೆ ನವೆಂಬರ್ 9ರ ಶನಿವಾರ 10.30ಕ್ಕೆ ಅಂತಿಮ ತೀರ್ಪು ನೀಡಲಾಗುವುದು ಎಂದು ಘೋಷಿಸಲಾಗಿದೆ. ಯಾವ ಕಾರಣಕ್ಕಾಗಿ ಹೀಗೆ ಏಕಾಏಕಿ ತೀರ್ಪು ನೀಡಲಾಗುತ್ತಿದೆ ಎಂಬ ಪ್ರಶ್ನೆ ದೇಶವಾಸಿಗಳಲ್ಲಿ ಮೂಡಿರುವಂತೆಯೇ ಇದರ ರೋಚಕ ವಿಚಾರ ಇಲ್ಲಿದೆ ಓದಿ…
ಅಯೋಧ್ಯಾ ವಿವಾದದ ವಿಚಾರವನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಇದೇ ನ.17ರಂದು ನಿವೃತ್ತರಾಗಲಿದ್ದಾರೆ. ಇದಕ್ಕೂ ಮುನ್ನ ಅವರು ಎಂದು ಬೇಕಾದರೂ ತೀರ್ಪು ಪ್ರಕಟಿಸಲು ಅವಕಾಶವಿದೆ. ಅವರು ನಿವೃತ್ತರಾಗುವ ದಿನವೇ ತೀರ್ಪು ನೀಡಲು ಅಂದು ಭಾನುವಾರವಾಗಿದ್ದು, ಜೊತೆಯಲ್ಲಿ ಸಾಮಾನ್ಯವಾಗಿ ನಿವೃತ್ತರಾಗುವ ದಿನ ಯಾವುದೇ ತೀರ್ಪುನ್ನು ನ್ಯಾಯಾಧೀಶರು ಪ್ರಕಟಿಸುವುದಿಲ್ಲ.
ಇನ್ನು, ನವೆಂಬರ್ 16ರಂದು ಎರಡನೆಯ ಶನಿವಾರವಾದ ಕಾರಣ, ನ.15ರಂದೇ ಗೊಗೋಯ್ ಅವರ ಕರ್ತವ್ಯದ ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ನ.14 ಅಥವಾ 15ರಂದು ತೀರ್ಪು ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿತ್ತು.
ಸಾಮಾನ್ಯವಾಗಿ, ನ್ಯಾಯಾಲಯವು ಒಂದು ತೀರ್ಪನ್ನು ಪ್ರಕಟಿಸಿದರೆ, ಮರುದಿನ, ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ ಮತ್ತು ಈ ಪ್ರಕ್ರಿಯೆಯು ಸಾಮಾನ್ಯವಾಗಿ ಒಂದು ಅಥವಾ ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ.
ಆದರೆ, ಅಯೋಧ್ಯೆ ಪ್ರಕರಣದ ತೀರ್ಪು ನವೆಂಬರ್ 14-15ರ ಮೊದಲು ಬರಬಹುದು ಎಂದು ನ್ಯಾಯಾಲಯ ಅಥವಾ ಸರ್ಕಾರ ಈ ಹಿಂದೆ ಸೂಚಿಸಿರಲಿಲ್ಲ. ಆದರೆ, ಶನಿವಾರ ಬೆಳಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಲಾಗುವುದು ಎಂದು ನಿನ್ನೆ ರಾತ್ರಿ ಏಕಾಏಕಿ ಘೋಷಿಸಲಾಯಿತು. ಯಾವ ಕಾರಣಕ್ಕಾಗಿ ಈ ನಿರ್ಧಾರ ಹೊರಬಿದ್ದಿದೆ ಗೊತ್ತಾ?
ಅಯೋಧ್ಯಾ ರಾಮ ಜನ್ಮ ಭೂಮಿ-ಬಾಬರಿ ಮಸೀದಿ ತೀರ್ಪು ಕೇವಲ ಒಂದು ಸ್ಥಳದ ವಿಚಾರ ಮಾತ್ರವಾಗಿರದೇ ಜನರ ಧಾರ್ಮಿಕ ಭಾವನಾತ್ಮಕ ವಿಚಾರವಾಗಿದೆ. ಹೀಗಾಗಿ, ಇಂತಹ ಪ್ರಕರಣದ ತೀರ್ಪು ಎಂತಹುದ್ದೇ ಸಂಭ್ರಮ ಹಾಗೂ ಅನಾಹುತವನ್ನೂ ಸಹ ಸೃಷ್ಠಿಸಬಹುದು. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಶಾಂತಿ ಕದಡುವ ಕಿಡಿಗೇಡಿಗಳ ಕೃತ್ಯವನ್ನು ತಡೆಯುವ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಇಂತಹ ಪಿತೂರಿಗಳನ್ನು ತಡೆಯುವ ತಂತ್ರದ ಭಾಗವಾಗಿ ಯಾವುದೇ ರೀತಿಯ ಮುನ್ಸೂಚನೆ ನೀಡದೇ ಏಕಾಏಕಿ ತೀರ್ಪು ಪ್ರಕಟಿಸಲು ನಿರ್ಧರಿಸಲಾಗಿದೆ.
ಏತನ್ಮಧ್ಯೆ, ಇಡೀ ಉತ್ತರ ಪ್ರದೇಶ ಸೇರಿದಂತೆ ದೇಶದಾದ್ಯಂತ ಮತ್ತು ವಿಶೇಷವಾಗಿ ಅಯೋಧ್ಯೆಯಲ್ಲಿ ಶಾಂತಿ ಖಾತ್ರಿಪಡಿಸಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ದೇಶದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಸಂದರ್ಭಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿರುವುದನ್ನು ಖಾತ್ರಿ ಪಡಿಸಿಕೊಂಡ ನ್ಯಾಯಾಲಯ ದಿಢೀರನೆ ತೀರ್ಪು ಪ್ರಕಟಿಸಲು ಮುಂದಾಗಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post