ನರೇಂದ್ರ ಮೋದಿಯವರನ್ನು ಕೆಣಕಿ, ನಿಂದಿಸುವ ಶತ್ರುಗಳು ಮತ್ತೆ ಮೂಲೆಗೆ ಮುದುಡಿ ಹೋಗುವುದು ಯಾಕೆ? ಜ್ಯೋತಿಷ್ಯ ರೀತಿಯಲ್ಲಿ ಕಾರಣವಿದೆ. ಮೋದಿಯವರ ಜಾತಕ ಏನು ಹೇಳುತ್ತದೆ ಎನ್ನುವುದನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ… ಮುಂದೆ ಓದಿ
ಪ್ರತಿಯೊಬ್ಬ ಮನುಷ್ಯನೂ ಒಂದೊಂದು ಗ್ರಹಗಳಿದ್ದಂತೆ ಸ್ವಯಂ ಪ್ರಕಾಶ ಇರುವವರೆ. ಕೆಲವರು ಉಲ್ಕಾ ಕುಗ್ರಹದಂತೆ, ಕೆಲವರು ಅಸ್ತ ಗ್ರಹದಂತೆ, ಕೆಲವರು ವಕ್ರ ಗ್ರಹದಂತೆ, ಕೆಲವರು ಗ್ರಹಯುತಿಯಂತೆ, ಕೆಲವರು ಉಚ್ಚ ಗ್ರಹರಂತೆ, ಇನ್ನು ಕೆಲವರು ನೀಚತ್ವ, ನೀಚಾರೋಹಿ, ನೀಚಾವರೋಹಿ, ಉಚ್ಚ ಅವರೋಹಿ, ಉಚ್ಚಾರೋಹಿ ಇತ್ಯಾದಿ ನವಗ್ರಹರಂತೆ ತಮ್ಮ ರಷ್ಮಿಗಳಿಂದ ಪ್ರಖ್ಯಾತ, ಕುಖ್ಯಾತರಾಗುತ್ತಾರೆ. ಇದರಲ್ಲಿ ಅನೇಕಾನೇಕ ರೂಪಗಳಿವೆ. ಈಗ ಮೋದಿಯವರ ಜಾತಕ ನೋಡೋಣ.
ಹೇಗಿದೆ ಮೋದಿಯವರ ಜಾತಕ?
ವೃಶ್ಚಿಕ ಲಗ್ನದ ಜಾತಕ ಇದು. ಲಗ್ನದಲ್ಲೇ ಕುಜ ಚಂದ್ರ ಯೋಗ. ದ್ವಿತಿಯಾಧಿಪತಿಯೂ, ತ್ರಿಕೋಣಾಧಿಪತ್ಯದ ಗ್ರಹನೂ ಕೇಂದ್ರದಲ್ಲಿದ್ದಾಗ ಅಖಂಡ ಸಾಮ್ರಾಜ್ಯ ಯೋಗವಾಗುತ್ತದೆ.
ಇವರದ್ದು ವಾಕ್ ಸ್ಥಾನಕ್ಕೆ ಸಂಬಂಧಿಸಿದ ಅಖಂಡ ಸಾವ್ರಾಜ್ಯ ಯೋಗ. ಅಂದರೆ unquestionable ಮಾತುಗಾರಿಕೆ. ಇವರಿಗೆ ಲಗ್ನಾಧಿಪತಿಯೇ ಷಷ್ಠಾಧಿಪತಿ. ಅಂದರೆ ಶತ್ರು ರಾಶ್ಯಾಧಿಪತಿ. ಈ ಕುಜನು ಲಗ್ನದಲ್ಲಿ ಸ್ಥಾನ ಬಲಿಷ್ಟತೆಯಲ್ಲಿ ರುಚಕ ಯೋಗವನ್ನೂ, ಶಶಿ ಮಂಗಳ ಯೋಗವನ್ನೂ ಕೊಡುತ್ತಾನೆ. ಆದರೆ ಷಷ್ಠಾಧಿಪತಿ(ಶತ್ರು ಕಾರಕ) ಯಾಗಿ ದುರ್ಬಲ. 0° ಕುಜನಾಗಿ ನೀಚಾಂಶ. ಲಗ್ನಾಧಿಪತಿಯೇ ಷಷ್ಠಾಧಿಪತಿಯಾದರೆ ಸ್ವಯಂಕೃತ ಅಪರಾಧ ಮಾಡುವವನಾಗುತ್ತಾನೆ.
ಈ ಸ್ವಯಂ ಕೃತ ಅಪರಾಧದೊಳಗೆ ಹಲವು ರೂಪಗಳಿವೆ. ಮೋದಿಯವರಿಗೆ ಲಭಿಸಿದ ರೂಪ ಯಾವುದು? ಇದೂ ಸ್ವಯಂಕೃತ ಅಪರಾಧವೇ ಆಗಿದೆ. ಆದರೆ ಕುಜನ ಕೇಂದ್ರದಲ್ಲಿ ಶುಕ್ರ, ಶನಿ, ಗುರುಗಳು ಇರುವುದರಿಂದ ಬಲವು ಹರಣವಾಗುತ್ತದೆ.
ಗಜಕೇಸರಿ ಯೋಗವಿದೆಯೇ?
ಗುರುವು ಚಂದ್ರನಿಂದ ಕೇಂದ್ರಗತನಾಗಿ ಗಜಕೇಸರಿ ಯೋಗ ಕಾರಕ. ಕುಜನ ಪೂರ್ಣ ವೀಕ್ಷಣೆ ಗುರುವಿಗಿದೆ. ಆಗ ಲಗ್ನಾಧಿಪತಿಯಾಗಿ ಬಲಿಷ್ಟನಾಗುತ್ತಾನೆ. ಕುಜನ ನೀಚಾಂಶವು ಆರೋಗ್ಯ ವಿಚಾರದಲ್ಲಿ ಸ್ವಲ್ಪ ತೊಂದರೆ. ಅಂದರೆ muscle pain ಇತ್ಯಾದಿ ಸೂಚಕ. ಹಾಗೆಯೇ ದುರ್ಬಲ ಶತ್ರುಗಳು. ಯಾವುದೇ ಶತ್ರುಗಳ ಹುಟ್ಟಿಗೆ ಮೋದಿಯವರ ಉತ್ಸಾಹ, ಚಾಣಕ್ಯತನವೇ ಕಾರಣ.
ಸಕಾಲಿಕ, ಮಾರ್ಮಿಕ, ಅವಮಾನಿಸಲ್ಪಡುವ ಉತ್ತರಗಳೇ ಕಾರಣ. ಇದು ಮೋದಿಯವರ ಸ್ವಯಂಕೃತ ಅಪರಾಧವಾಗಿರುತ್ತದೆ. ಎಲ್ಲಾದರೂ ಮೋದಿಯವರು ಮೌನಮೋಹನ ಸಿಂಗ್ ಅವರಂತಿದ್ದರೆ ಶತ್ರುತ್ವ ಹುಟ್ಟುತ್ತಿರಲಿಲ್ಲ.
ಶತ್ರುಗಳು ದಾಳಿ ಮಾಡುವಾಗ ಅವರಾಗಿಯೇ ಕುಸಿದು ಬೀಳುತ್ತಾರೆ. ಕಾರಣ ಬಲಿಷ್ಟ ಮೂಲತ್ರಿಕೋಣ ವೀಕ್ಷಕ ಶನಿಯು ವಾಕ್ ಸ್ಥಾನಾಧಿಪತಿ ಗುರುವಿನ ವೀಕ್ಷಣೆಯಲ್ಲಿ ಇರುವುದು.
ಇವರ ಶತ್ರುಗಳು ಹೇಗಿರಬಹುದು?
ಅವಸರದಲ್ಲಿ, ಹಿಂದು ಮುಂದು ನೋಡದೆ ಠೀಕೆ ಮಾಡುತ್ತಾರೆ ಮತ್ತು ತಮ್ಮ ಮುಖಕ್ಕೇ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಉದಾ: ಮಣಿಶಂಕರ್ ಐಯ್ಯರ್ (ನೀಚ ಶನಿ ಹೊಂದಿರುವ ಜಾತಕದವರು); ರಾಹುಲ್ ಗಾಂಧಿ(ನೀಚ ವಾಕ್ ಸ್ಥಾನಾಧಿಪತಿ ಶನಿ); ಕೇಜ್ರಿವಾಲ್( ನೀಚ ಶನಿ), ಸಿದ್ದರಾಮ(ನೀಚಾಂಶ ಹೊದಿರುವ ದುರ್ಬಲ ಶನಿ); ಸೋನಿಯ ಗಾಂಧಿ ಇತ್ಯಾದಿ ದುರ್ಬಲ ಶನಿ ಇರುವವರು. ನಂತರ ಕೆಲ ದ್ವಾರಕನಾಥ, ಚಂಪಾರಂತಹ ನೀಚ, ದುರ್ಬಲ ಶನಿ ಜಾತಕದವರು ಮೋದಿಯ ಮೇಲೆ attack ಮಾಡುತ್ತಾರೆ. ಬೆಂಕಿಗೆ ಪತಂಗ ಬಿದ್ದಂತೆ ರೆಕ್ಕೆ ಸುಟ್ಟು ಕೊನೆಗೆ ಹರಿದಾಡುತ್ತಾರೆ.
ಇದು ಮೋದಿಯವರ ಜೀವನ ಪರ್ಯಂತ ಇರುವ ಯೋಗ. ಹಾಗಾಗಿ ಮೋದಿಯವರು ಅವಮಾನಿತರಾಗಿ ಬದುಕುವ ಪ್ರಮೇಯವೇ ಇಲ್ಲ. ಕೆಣಕಿದವರು ಒಡನೆಯೇ ಹೊಡೆತ ತಿನ್ನುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮೋದಿಯವರು ಶತ್ರುಗಳಿಗೆ ಹೊಡೆಯುವುದಿಲ್ಲ. ಶತ್ರುಗಳು ತಮ್ಮ ತಮ್ಮ ಕೈಯಲ್ಲೇ ಹೊಡ್ಕೊಳ್ಳುವಂತೆ ಮಾಡುವ ಗುಣ ಮೋದಿಯವರಲ್ಲಿದೆ. ಇದು ಸೋಲಿಲ್ಲದ ಸರದಾರ ಜಾತಕ. ಒಂದು ವೇಳೆ ಇವರನ್ನು ಸೋಲಿಸಿದರೆ, ಸೋಲಿಸಿದವರಿಗೇ ಅಪಾಯವು ಕಟ್ಟಿಟ್ಟ ಬುತ್ತಿ. ಹಾಗಾಗಿ ಮೋದಿಯವರನ್ನು ಅವಮಾನಿಸುವುದಕ್ಕೆ ಹೋಗುವವರು ದೊಡ್ಡ ಬಾತ್ ಟವಲ್ ಹೆಗಲಲ್ಲಿ ಇಟ್ಟುಕೊಳ್ಳುವುದು ಉತ್ತಮ.
Discussion about this post