ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |ಪ್ರಶ್ನೆ: ನನ್ನ ಹೆಸರು ಉಮೇಶ, ರೈತಾಪಿ ಕೆಲಸ, ಕಲ್ಬುರ್ಗಿ ಜಿಲ್ಲೆ. ಇತ್ತೀಚಿಗೆ ನಮ್ಮ ತಂದೆ ನಿಧನರಾಗಿದ್ದಾರೆ. ಈಗ ನಾನು, ನನ್ನ ತಾಯಿ ಹಾಗು ಕಿರಿಯ ಸಹೋದರ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮ್ಮ ಕುಟುಂಬದ ಆಸ್ತಿ ಒಂದು ಮನೆ, 1,350 ಚದರ ಅಡಿ ಅಳತೆಯ ಒಂದು ಕಣ ಹಾಗು 11 ಎಕರೆ ಕೃಷಿ ಭೂಮಿ. ನಮ್ಮ ತಂದೆಯ ಮರಣದ ನಂತರ ಅಪರಿಚಿತ ಮಹಿಳೆಯೊಬ್ಬರು ನನ್ನ ತಂದೆಯ ಎರಡನೇಯ ಹೆಂಡತಿಯೆಂದು ಹಾಗು ನನ್ನ ತಂದೆಯಿಂದ ಅವರಿಗೊಬ್ಬರು ಹೆಣ್ಣು ಮಗಳಿದ್ದಾಳೆಂದು ಹೇಳಿಕೊಂಡು ವಕೀಲರ ಮೂಲಕ ನಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ನೋಟೀಸ್ ಕಳಿಸಿದ್ದಾರೆ. ನಮ್ಮ ತಂದೆ ಎಂದೂ ಕೂಡ ತಾವು ಮತ್ತೊಂದು ಮದುವೆಯಾಗಿರುವ ವಿಚಾರ ನಮ್ಮ ಬಳಿ ತಿಳಿಸಿಲ್ಲ. ನೋಟೀಸ್ ನೀಡಿರುವ ಮಹಿಳೆ ಹಾಗು ಅವರ ಮಗಳಿಗೆ ನಾವು ಆಸ್ತಿಯಲ್ಲಿ ಪಾಲು ನೀಡಬೇಕೆ?
ಉತ್ತರ: ನೋಟೀಸಿಗೆ ವಕೀಲರೊಬ್ಬರ ಮೂಲಕ ಉತ್ತರ ನೀಡಬಹುದು. ಕೇವಲ ಬಾಯಿ ಮಾತಿನ ಪ್ರತಿಪಾದನೆ ಮೂಲಕ ಅವರು ನಿಮ್ಮ ತಂದೆಯ ಎರಡನೇಯ ಪತ್ನಿಯಾಗುವುದಿಲ್ಲ. ಅವರು ನಿಮ್ಮ ತಂದೆಯ ಎರಡನೇಯ ಪತ್ನಿಯೆಂದು ಹಾಗು ಅವರ ಮಗಳಿಗೆ ನಿಮ್ಮ ತಂದೆಯವರೇ ತಂದೆಯೆಂದು ಸಾಕ್ಷಿ ಸಮೇತ ಸಾಬೀತು ಮಾಡುವ ಹೊಣೆ ಆ ಮಹಿಳೆಯದ್ದು.
ಹಿಂದೂ ವಿವಾಹ ಕಾಯಿದೆಯ ಪ್ರಕಾರ ಮೊದಲನೆಯ ಪತ್ನಿ ಬದುಕಿದ್ದಾಗಲೇ ಅವಳಿಂದ ವಿಚ್ಚೇದನ ಪಡೆಯದೆ ಮತ್ತೊಂದು ಮದುವೆಯಾದರೆ, ಆ ಮದುವೆ ಊರ್ಜಿತವಲ್ಲ. ಅದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಹೀಗೆ ಮದುವೆಯಾದ ಎರಡನೇಯ ಪತ್ನಿಗೆ ಪತಿಯ ಆಸ್ತಿಯಲ್ಲಿ ಪಾಲು ಇರುವುದಿಲ್ಲ. ಆದರೆ ಈ ಮದುವೆಯಿಂದ ಜನಿಸಿದ ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post