ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಳಿಗಾಲವನ್ನು #Winter ಆರಾಮದಾಯಕ ಋತುವೆಂದು ಭಾವಿಸಿದರೂ, ವೈದ್ಯರ ಪ್ರಕಾರ ಚಳಿಯ ವಾತಾವರಣವು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಚರ್ಮಕ್ಕೆ ಮೌನವಾಗಿ ಹಾನಿ ಉಂಟುಮಾಡಬಹುದು. ಈ ಸಮಸ್ಯೆಗಳು ನಿಧಾನವಾಗಿ ಜಾಸ್ತಿಯಾಗುತ್ತಾ, ಗಂಭೀರ ಹಂತಕ್ಕೆ ಬಂದಾದ ಮಾತ್ರ ಗಮನಕ್ಕೆ ಬರುತ್ತವೆ.
ಮೆಡಿಕವರ್ ಆಸ್ಪತ್ರೆಯ #MediCover ಚರ್ಮರೋಗ ತಜ್ಞೆ ಡಾ. ರಜಿತಾ ಅಲ್ಲೂರಿ ಅವರ ಪ್ರಕಾರ, ಕಡಿಮೆ ತೇವಾಂಶ, ತಂಪಾದ ಗಾಳಿ, ಹೆಚ್ಚು ಬಿಸಿ ನೀರಿನ ಸ್ನಾನ, ರೂಮ್ ಹೀಟರ್ ಮತ್ತು ಏರ್ ಕಂಡೀಷನರ್ #AirConditioner ಬಳಕೆಯಿಂದ ಚರ್ಮದ ಸ್ವಾಭಾವಿಕ ರಕ್ಷಣಾ ಪದರವನ್ನು ದುರ್ಬಲಗೊಳಿಸುತ್ತವೆ. “ಸ್ವಲ್ಪ ಕಡಿತಾ, ಚರ್ಮದ ಬಿಳಿಚಿಕೊಳ್ಳುವುದು ಸಾಮಾನ್ಯವೆಂದು ನಿರ್ಲಕ್ಷಿಸಿದರೆ, ಇದು ಎಕ್ಸಿಮಾ, #Eczema ಡರ್ಮಟೈಟಿಸ್, ಚರ್ಮದ ಸೋಂಕುಗಳು ಮತ್ತು ಬಿರುಕುಗಳಿಗೆ ಕಾರಣವಾಗಬಹುದು” ಎಂದು ಅವರು ಎಚ್ಚರಿಸುತ್ತಾರೆ.
ವೈದ್ಯರ ಪ್ರಕಾರ, ಚಳಿಗಾಲದಲ್ಲಿ ವಯಸ್ಕರಿಗಿಂತ ಮಕ್ಕಳ ಚರ್ಮ ಹೆಚ್ಚು ವೇಗವಾಗಿ ಹಾನಿಗೊಳಗಾಗುತ್ತದೆ. ಮಕ್ಕಳ ತಜ್ಞೆ ಡಾ. ಲಿನತಾ ರೆಡ್ಡಿ ಅವರ ಪ್ರಕಾರ, ಮಕ್ಕಳ ಚರ್ಮದ ರಕ್ಷಣಾ ಪದರ ತೆಳುವಾಗಿದ್ದು, ಬೇಗ ತೇವಾಂಶ ಕಳೆದುಕೊಳ್ಳುತ್ತದೆ. “ಮಕ್ಕಳಲ್ಲಿ ಚರ್ಮ ಒಣಗುವುದು ಸಹಜವೆಂದು ಪೋಷಕರು ತಡ ಮಾಡುತ್ತಾರೆ. ಆದರೆ ಚಿಕಿತ್ಸೆ ಇಲ್ಲದೆ ಬಿಟ್ಟರೆ ಇದು ಸೋಂಕುಗಳು, ತುಟಿಗಳ ಬಿರುಕುಗಳು ಮತ್ತು ಅಲರ್ಜಿಕ್ ಸಮಸ್ಯೆಗಳ ತೀವ್ರತೆಗೆ ಕಾರಣವಾಗಬಹುದು,” ಎಂದು ಅವರು ತಿಳಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ತಂಪಾದ ವಾತಾವರಣ, ಡ್ರೈ ತರಗತಿಗಳು, ಪದೇಪದೇ ಕೈ ತೊಳೆಯುವುದು ಹಾಗೂ ತೀವ್ರ ಸಾಬೂನು-ಸ್ಯಾನಿಟೈಸರ್ ಬಳಕೆ ಕಾರಣದಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಶಿಶುಗಳು ಮತ್ತು ಪುಟ್ಟ ಮಕ್ಕಳು ಇನ್ನಷ್ಟು ಸಂವೇದನಾಶೀಲರಾಗಿರುತ್ತಾರೆ.
ವೈದ್ಯರು ನಿಯಮಿತ ಮಾಯಿಶ್ಚರೈಸರ್ ಬಳಕೆ, ಬಿಸಿ ನೀರಿನ ಸ್ನಾನವನ್ನು ನಿಯಂತ್ರಿಸುವುದು, ಮೃದುವಾದ ಕ್ಲೆನ್ಸರ್, ಸಾಕಷ್ಟು ನೀರು ಸೇವನೆ ಮತ್ತು ಆರಂಭದಲ್ಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯವೆಂದು ಸಲಹೆ ನೀಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















