ಬೆಂಗಳೂರು: ಭಾರತದ ಅತ್ಯಂತ ದೊಡ್ಡ ರೇಡಿಯೊ ಜಾಲಗಳಲ್ಲಿ ಒಂದಾದ 92.7 ಬಿಗ್ ಎಫ್‌ಎಂ 72ನೆಯ ಸ್ವಾತಂತ್ರ್ಯ ದಿನೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಸ್ವಚ್ಛತಂತ್ರ ಅಭಿಯಾನಕ್ಕೆ ಚಾಲನೆ ನೀಡಿದೆ.
ಈ ಉಪಕ್ರಮ ಬೆಂಗಳೂರಿನ ನಾಗರಿಕರಿಗೆ ನೈರ್ಮಲ್ಯವಿಲ್ಲದ ಮತ್ತು ಸ್ವಚ್ಛತೆರಹಿತ ಪರಿಸರದಿಂದ ಸ್ವಾತಂತ್ರ್ಯ ನೀಡುವ ಉದ್ದೇಶ ಹೊಂದಿದೆ.
ಬಿಗ್ ಎಂಜೆ ಶೃತಿ ನೇತೃತ್ವದ ಈ ಉಪಕ್ರಮದಲ್ಲಿ 72 ಗಂಟೆಗೂ ಹೆಚ್ಚು ಅವಧಿ 9 ತಾಣಗಳನ್ನು ಸ್ವಚ್ಛಗೊಳಿಸಿದರು. ಈ ಮಹತ್ತರ ಉಪಕ್ರಮಕ್ಕೆ ಖ್ಯಾತ ನಟ ಜಯರಾಂ ಕಾರ್ತಿಕ್ ಚಾಲನೆ ನೀಡಿದರು ಮತ್ತು ಸ್ಥಳೀಯ ಕಾರ್ಪೊರೇಟರ್‌ಗಳು, ಶಾಸಕರು ಮತ್ತು ಬಿಗ್ ಎಫ್‌ಎಂ ಶೋತೃಗಳು ಈ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಉತ್ಸಾಹದಿಂದ ಭಾಗವಹಿಸಿದರು.
ರೇಡಿಯೊದಲ್ಲಿ ಪಟ್ ಪಟಾಕಿ ಶೃತಿ ಎಂದು ಖ್ಯಾತಿ ಪಡೆದಿರುವ ಎಂಜೆ ಶೃತಿ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಅರಿವನ್ನು ಮೂಡಿಸುವುದು ಮಾತ್ರವಲ್ಲದೆ ಸಕ್ರಿಯವಾಗಿ ಸಮಸ್ಯೆಗಳ ನಿವಾರಣೆಯಲ್ಲಿ ತೊಡಗಿಕೊಳ್ಳುತ್ತಾರೆ.
1947ರಲ್ಲಿ ಭಾರತಕ್ಕೆ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಲಭಿಸಿತು ಮತ್ತು ಸ್ವಾತಂತ್ರ್ಯದ ಆನಂದ ಪಡೆಯಿತು. ಬಿಗ್ ಎಫ್‌ಎಂ ಬೆಂಗಳೂರು ನಗರಿಗರಿಗೆ ತಮ್ಮ ಪರಿಸರವನ್ನು ಸ್ವಚ್ಛಗೊಳಿಸುವ ಮತ್ತು ಸ್ವಚ್ಛತಂತ್ರದ ಆನಂದ ಒದಗಿಸುವ ಗುರಿ ಹೊಂದಿದೆ.
ಈ ಸ್ವಚ್ಛತಾ ಕಾರ್ಯಕ್ರಮ ಶಿವಾಜಿನಗರ, ಮಹದೇವಪುರ ಮತ್ತು ಬಿಟಿಎಂ ಬಡಾವಣೆಗಳನ್ನು ಒಳಗೊಂಡಿತ್ತು. ಚಾಮರಾಜಪೇಟೆ, ಸುಂಕದಕಟ್ಟೆ ಮತ್ತು ಮಾವಳ್ಳಿಗಳನ್ನೂ ಸ್ವಚ್ಛಗೊಳಿಸಲಾಯಿತು. ಮಲ್ಲೇಶ್ವರಂ, ಹೆಬ್ಬಾಳ ಮತ್ತು ಕೆಂಗೇರಿಗಳ ಸ್ವಚ್ಛತೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯವಾಯಿತು.
ಶಾಸಕರಾದ ಸಿ.ಎನ್.ಅಶ್ವತ್ಥ ನಾರಾಯಣ್, ಉದಯ್ ಗರುಡಾಚಾರ್, ರಾಮಲಿಂಗಾರೆಡ್ಡಿ, ಮುನಿರತ್ನ, ಸೌಮ್ಯಾ ರೆಡ್ಡಿ, ಬಿ.ಎಸ್. ಸುರೇಶ್ ಅವರಿಂದ ಈ ಉಪಕ್ರಮಕ್ಕೆ ಬೆಂಬಲ ನೀಡಿದ್ದರು.
Discussion about this post