ಗಾಜಿಯಾಬಾದ್: ವ್ಯಕ್ತಿಯೊಬ್ಬ ತನ್ನ ಕಾರಿನ ಬಾನೆಟ್ ಮೇಲೆ ನೇತಾಡುತ್ತಿರುವಂತೆಯೇ ಚಾಲಕ ಸುಮಾರು 2 ಕಿಮೀ ದೂರ ದಬ್ಬಿಕೊಂಡು ಹೋಗಿರುವ ಶಾಕಿಂಗ್ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಗಾಜಿಯಾಬಾದ್’ನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಚಾಲಕನ ಅಜಾಗರೂಕತೆಯ ಚಾಲನೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಆತನ ಮೇಲೆಯೇ ಕಾರನ್ನು ಗುದ್ದಿಸಲು ಚಾಲಕ ಯತ್ನಿಸಿದ ವೇಳೆ ವ್ಯಕ್ತಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾರೆ.
ಆದರೆ, ಕಾರು ಚಾಲಕ ಇದನ್ನು ಲೆಕ್ಕಿಸದೇ ವ್ಯಕ್ತಿ ನೇತಾಡುತ್ತಿರುವಂತೆಯೇ ಸುಮಾರು 2 ಕಿಮೀ ದೂರ ಆತನನ್ನು ದಬ್ಬಿಕೊಂಡೇ ಹೋಗಿದ್ದಾನೆ. ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.
#WATCH In a shocking case of road rage seen in Ghaziabad, driver of a car drove for almost 2 kilometers with a man clinging on to the car bonnet. The driver was later arrested by Police (6.3.19) (Note:Strong language) pic.twitter.com/hocrDi7qgg
— ANI UP (@ANINewsUP) March 7, 2019
ಸುಮಾರು 2 ಕಿಮೀ ದೂರ ಸಂಚರಿಸಿದ ವೇಳೆ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ತಡೆದಿದ್ದಾರೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Discussion about this post