ಇತ್ತೀಚೆಗೆ ಆಡಿಯೋ ಲಾಂಚ್ ಮಾಡಿದ `ಸಪ್ಲಿಮೆಂಟರಿ` ಚಿತ್ರತಂಡ ನಿನ್ನೆಯಷ್ಟೆ ಟ್ರೇಲರ್ ಬಿಡುಗಡೆ ಮಾಡಿದೆ. ಹಿರಿಯ ನಟ ಡೈನಾಮಿಕ್ ಸ್ಟಾರ್ ದೇವರಾಜ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರೆ.
ಈಗಾಗಾಲೇ ಹಾಡುಗಳು ಕೇಳುಗರ ಮನಸೂರೆಗೊಂಡಿವೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿರುವ ಡಾ.ದೇವರಾಜ್ ಎಸ್ ಸಾಹಿತ್ಯದ `ಬ್ಯಾಡಕಣೋ` ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಧೂಳ್ ಎಬ್ಬಿಸುತ್ತಿದೆ. ಲಕ್ಷಾಂತರ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
ಇದೇ ತಿಂಗಳು ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನಿಮಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ, ಯುವಕ-ಯುವತಿಯರ ಖಿನ್ನತೆ, ಗುರು- ಶಿಷ್ಯರ ಸಂಬಂಧವನ್ನು ವಿಭಿನ್ನವಾದ ಶೈಲಿಯಲ್ಲಿ ನಿರ್ದೇಶಕ ಡಾ.ದೇವರಾಜ್ ಎಸ್. ಹೇಳಲು ಹೊರಟಿದ್ದಾರೆ. ಈಗಾಗಲೇ ಸಿನಿಮಾರಂಗದ ದಿಗ್ಗಜರಾದ ದೊರೆ-ಭಗವಾನ್, ದೇವರಾಜ್, ಪ್ರಜ್ವಲ್ ದೇವರಾಜ್, ಸರಿಗಮ ವಿಜಿ ಅವರು ಚಿತ್ರತಂಡದ ಈ ಹೊಸಪ್ರಯತ್ನಕ್ಕೆ ಶ್ಲಾಘನೆ ನೀಡಿದ್ದಾರೆ.
ಆನಂದ್ ಸಿನಿಮಾಸ್ ಸಹಕಾರದೊಂದಿಗೆ, ಹೆಬ್ಬುಲಿ ವಾಹನ ಮಹದೇಶ್ವರ ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಮನ್ನೋತ್, ಕುಶ್, ಶ್ರದ್ಧಾಭಟ್, ಹನುಮಂತೇಗೌಡ್ರು, ಮಂಡ್ಯ ಚಂದ್ರು ಪ್ರಮುಖ ತಾರಾಬಳಗದಲ್ಲಿದ್ದಾರೆ.
ಮಹೇಂದ್ರ ಮನ್ನೋತ್, ರಶ್ಮಿ.ಎಸ್, ಸಂತೋಷ್.ಎಂ, ಹೇಮಶೇಖರ್ ಹಾಗೂ ಗುರು.ಸಿ. ಬಂಡಿಯವರ ನಿರ್ಮಾಣವಿದೆ. ರಾಘವ ಸುಭಾಷ್ ಸಂಗೀತ ನಿರ್ದೇಶಕ , ಶಿವು ತುಮಕೂರು ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ಸಾಗರ್ ಗುಲ್ಬರ್ಗ ನೃತ್ಯ ನಿರ್ದೇಶಕ ಹಾಗೂ ವಸಂತಕುಮಾರ್, ಪರಾಗ್ ಸಾಹಸ ನಿರ್ದೇಶಕ ಈ ಚಿತ್ರಕ್ಕಿದೆ.
Discussion about this post