ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯುಗಾದಿ ಹಬ್ಬ ಬರುತ್ತಿದೆ. ಈ ಹಬ್ಬದಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ಹೆಚ್ಚಿನ ಆದ್ಯತೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಯಾವುದಾದರೊಂದು ತಿನಿಸುಗಳನ್ನು ಮಾಡಿ ಸವಿಯುವ ಮಜಾನೇ ಬೇರೆ. ಪಾಯಸ, ಚಿತ್ರಾನ್ನ, ಪುಳಿಯೋಗರೆ ಜತೆಗೆ ಕರ್ಜಿಕಾಯಿ(ಗುಜಿಯಾ) ಇದ್ದರೆ ಹಬ್ಬದ ಊಟಕ್ಕೆಇನ್ನಷ್ಟು ಮಜಾ ಇರುತ್ತದೆ.
ಹಾಗಾದರೆ (ಗುಜಿಯಾ)ಕರ್ಜಿಕಾಯಿಯನ್ನು ಮಾಡುವುದಾದರೂ ಹೇಗೆ? ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಇಲ್ಲಿದೆ ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್, ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್ ರ ಹೊಸ ರುಚಿ- ಪಾಕ ವಿಧಾನ.
ಸುಮೇರು ಗೋಡಂಬಿ ಬಾದಾಮಿ ತೆಂಗಿನ ತುರಿ ಕರ್ಜಿಕಾಯಿ(ಗುಜಿಯಾ)
ಪದಾರ್ಥಗಳು:
ಮೈದಾ – 250 ಗ್ರಾಂ |
ಸುಮೇರು ತಾಜಾ ತುರಿದ ತೆಂಗಿನಕಾಯಿ – 1 ಕಪ್ |
ತುಪ್ಪ – 4 ಟೀಸ್ಪೂನ್ |
ಕೆಂಪು ಒಣದ್ರಾಕ್ಷಿ (ಸ್ಥೂಲವಾಗಿ ಕತ್ತರಿಸಿದ) – 25 ಗ್ರಾಂ |
ಗೋಡಂಬಿ (ಹುರಿದು ಪುಡಿಮಾಡಿದ) – 25 ಗ್ರಾಂ |
ಬಾದಾಮಿ (ಹುರಿದು ಪುಡಿಮಾಡಿದ) – 25 ಗ್ರಾಂ |
ಏಲಕ್ಕಿ ಪುಡಿ – 1ಚಿಟಿಕೆ |
ಸಕ್ಕರೆ – 220 ಗ್ರಾಂ |
ನೀರು – 50 ಮಿಲಿ |
ಎಣ್ಣೆ ಅಥವಾ ತುಪ್ಪ – (ಕರಿಯಲು ಉಪಯೋಗಿಸಬಹುದಾದ ಖಾದ್ಯ) |
ಸಿದ್ಧಪಡಿಸುವ ವಿಧಾನ:
- ಮೇಲೆ ತಿಳಿಸಿದ ಪದಾರ್ಥಗಳನ್ನು ಸಿದ್ಧವಾಗಿಡಿ
- ಚಪ್ಪಟೆ ಪಾತ್ರೆಯಲ್ಲಿ ಅಥವಾ ಮಿಕ್ಸಿಂಗ್ಬೌಲ್‌ನಲ್ಲಿ ಮೈದಾಹಿಟ್ಟು, ತುಪ್ಪವನ್ನು ಪುಡಿಪುಡಿಯಾಗಿ ಸೇರಿಸಿ. ಮಿಶ್ರಣ ಮಾಡಿದ ನಂತರ ನಿಮ್ಮ ಕೈಗಳನ್ನು ಎರಡು ಅಥವಾ ಮೂರು ಬಾರಿ ಒದ್ದೆ ಮಾಡಿ ನಯವಾದ ಹಿಟ್ಟನ್ನು ಚೆನ್ನಾಗಿ ಸಂಯೋಜಿಸಿ.
- ಬೆರೆಸಿದ ಹಿಟ್ಟನ್ನು 45 ನಿಮಿಷಗಳ ಕಾಲ ಮುಚ್ಚಿಡಿ.
- ಹೂರ್ಣ ಮಾಡಬೇಕಾದ ವಿಧಾನ, ಭಾರವಾದ ತವಾದಲ್ಲಿ ಸುಮೇರು ತುರಿದ ತೆಂಗಿನಕಾಯಿಯನ್ನು ಕಡಿಮೆ ಅಂಚಿನಲ್ಲಿ ಮಸುಕಾದ ಕೆಂಪುಬಣ್ಣವನ್ನು ಸಾಧಿಸುವವರೆಗೆ ಅಥವಾ ತೇವಾಂಶವನ್ನು ಕಳೆದುಕೊಳ್ಳುವವರೆಗೆ ಹುರಿಯಿರಿ.
- ಮತ್ತೊಂದು ಬಾಣಲೆಯಲ್ಲಿ ಸಕ್ಕರೆ, ನೀರು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ಸಕ್ಕರೆ ಕರಗಲು ಬಿಡಿ ಮತ್ತು 2- ಸ್ಟ್ರಿಂಗ್ಸ್ಥಿರತೆಯನ್ನು ಸಾಧಿಸಿದ ನಂತರ ಪುಡಿ ಮಾಡಿದ ಗೋಡಂಬಿ ಮತ್ತು ಬಾದಾಮಿ ಬೀಜಗಳನ್ನು ಹಾಗು ಒಣದ್ರಾಕ್ಷಿಯನ್ನು ಸೇರಿಸಿ. ನಂತರ ಹುರಿದ ಸುಮೇರು ತುರಿದ ತೆಂಗಿನಕಾಯಿಗಳನ್ನು ಸೇರಿಸಿ, ಚೆನ್ನಾಗಿ ಕಲಿಸಿರಿ.
- ಈಗ ಕಲಿಸಿದ (ನಾದಿಟ್ಟ)ಹಿಟ್ಟನ್ನು 25 ಗ್ರಾಂ ನಂತೆ ಸಮಾನ ಗಾತ್ರದ ಭಾಗಗಳಾಗಿ ವಿಂಗಡಿಸಿ ಮತ್ತು ಉಂಡೆಗಳಾಗಿ ಮಾಡಿಕೊಳ್ಳಿ.
- ಹಿಟ್ಟಿನ ಉಂಡೆಗಳನ್ನು ಚಪ್ಪಟೆ (ಹಪ್ಪಳದ ಆಕಾರ) ಮಾಡಿ ಮತ್ತು 5 ರಿಂದ 4-ಇಂಚು ವ್ಯಾಸಕ್ಕೆ ಲಟ್ಟಿಸಿಕೊಳ್ಳಿ.
- ಒಂದು ಚಮಚವನ್ನು ಬಳಸಿ ಸುಮೇರು ತೆಂಗಿನ ತುರಿ, ಸಕ್ಕರೆ, ಗೋಡಂಬಿ ಬಾದಾಮಿ, ಹೂರಣವನ್ನು ಭರ್ತಿ ಮಾಡಿ (ಸುಮಾರು 15 ಗ್ರಾಂ) ಮತ್ತು ಅರ್ಧ ವೃತ್ತಕ್ಕೆ( ಕರ್ಜಿಕಾಯಿನ ಅಕಾರ) ಮಡಚಿಕೊಳ್ಳಿ. ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಕಡುಬು ಅಚ್ಚನ್ನು ಬಳಸಬಹುದು.
- ಎಲ್ಲಾ ತಯಾರಿಕೆ ಮುಗಿಸಿದ ನಂತರ ಕಡಾಯಿಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಸಣ್ಣ ಕಾವಿನಲ್ಲಿ ಕಾಯಿಸಿಕೊಂಡು, ತುಂಬಿಟ್ಟ ಕರ್ಜಿಕಾಯಿಗಳನ್ನುತಿಳಿ ಚಿನ್ನದ ಬಣ್ಣ ಬರುವವರೆಗೂ ಡೀಪ್ ಫ್ರೈ ಮಾಡಿ.
ಈ ರುಚಿಯಾದ ಸುಮೇರು ಕರ್ಜಿಕಾಯಿಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಸ್ವಾದಿಸಿ ಆನಂದಿಸಿ. ಕರ್ಜಿಕಾಯಿಗಳನ್ನು15 ರಿಂದ 20 ದಿನಗಳವರೆಗೆ ಗಾಳಿಯ ಬಿಗಿಯಾದ ಡಬ್ಬಿಗಳಲ್ಲಿ ಸಂಗ್ರಹಿಸಿಡಬಹುದು.
ಲೇಖಕರು: ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್, ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್
Discussion about this post