ಲಕ್ನೋ: ದೇಶದ ಗಾಂಧಿ ಕುಟುಂಬದ ಸದಸ್ಯರಿಗೆ ಚುನಾವಣೆ ಎಂದರೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್’ಗೆ ತೆರಳುವಂತೆ. ಈಗ ಅವರು ಬಂದರೆ, ಮತ್ತೆ ನಿಮಗೆ ಸಿಗುವುದು ಐದು ವರ್ಷದ ನಂತರವೇ ಎಂದು ಉತ್ತರ ಪ್ರದೇಶ ಡಿಸಿಎಂ ದಿನೇಶ್ ಶರ್ಮಾ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ತಮ್ಮ ತ್ರಿ ದಿನ’ ಪ್ರಯಾಗ್ ರಾಜ್ ಪ್ರಚಾರದ ಮೊದಲನೇ ದಿನ ಪ್ರಿಯಾಂಕ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಗಂಗಾ ನದಿಯಲ್ಲಿ ದೋಣಿ ವಿಹಾರವನ್ನೂ ನಡೆಸಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನಿಸಿ ರಾಜ್ಯದ ಉಪಮುಖ್ಯಮಂತ್ರಿ ಶರ್ಮಾ ಅವರು ಕೈ ನಾಯಕಿಯನ್ನು ಟೀಕಿಸಿದ್ದಾರೆ.
Dy CM D Sharma on Priyanka Gandhi Vadra: Had it been old times,they would've been called a 'Rajgharana'. They come during elections, have picnic, go back&return after 5 yrs. 'Boat yatra' is only for votes. Inki boat yatra mein khot pehle hi inke sehyogiyon ne darsha diya. (18.03) pic.twitter.com/caOcWJkIiC
— ANI UP (@ANINewsUP) March 19, 2019
ಚುನಾವಣಾ ಸಂದರ್ಭಗಳಲ್ಲಿ ಬಂದು ಪಿಕ್’ನಿಕ್ ರೀತಿಯಲ್ಲಿ ಸುತ್ತಾಡಿ ಮರಳಿ ಹೋಗುವ ಇವರು ಮತ್ತೆ ನಿಮ್ಮ ಕೈಗೆ ಸಿಗುವುದು ಐದು ವರ್ಷಗಳ ಬಳಿಕವೇ. ಇದು ತಲೆತಲಾಂತರಗಳಿಂದ ನಡೆದು ಬಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವ ಅರಿವು ಇವರಿಗೆಲ್ಲಾ ಇದ್ದಂತಿಲ್ಲ, ರಾಜ ಘರಾಣೆ ಎಂಬುದಾಗಿ ತಿಳಿದುಕೊಂಡಂತಿದೆ ಎಂದವರು ಅಣಕವಾಡಿದ್ದಾರೆ.
ಇನ್ನು, ಪ್ರಿಯಾಂಕಾ ಗಾಂಧಿ ಕುರಿತಾಗಿ ಮಾತಿನ ಪ್ರಹಾರ ನಡೆಸಿರುವ ಅವರು, ಇವರೆಲ್ಲಾ ಮುಖ ಉಳಿಸಿಕೊಳ್ಳುವ ಸಲುವಾಗಿ ಇಂತಹ ನೌಟಂಕಿಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ನಿನ್ನೆ ಪ್ರಿಯಾಂಕ ಅವರು ನಡೆಸಿದ ದೋಣಿ ವಿಹಾರವೂ ಸಹ ಒಂದು ಕಟಕಿಯಾಡಿದ್ದಾರೆ.
Discussion about this post