ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ಥಾನದ ನಡುವೆ ಯುದ್ಧದಂತಹ ಸನ್ನಿವೇಶ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಕರಾಚಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ತನ್ನ ರಾಷ್ಟ್ರದಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಪುಲ್ವಾಮಾ ದಾಳಿಯ ನಂತರ, ಬಾಲಾಕೋಟ್’ನಲ್ಲಿ ಭಾರತ ಪ್ರತೀಕಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಪಾಕ್ ಹೇಳಿಕೊಂಡಿದೆ.
ಪಾಕ್ ಸೇನಾ ಮುಖ್ಯಸ್ಥರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ತತಕ್ಷಣವೆ ಜಾರಿಗೆ ಬರುವಂತೆ ಕರಾಚಿ, ಖೈಬರ್ ಸೇರಿದಂತೆ ತುರ್ತು ಪರಿಸ್ಥಿತಿ ಘೋಷಿಸಿ, ತನ್ನ ಭದ್ರತಾ ಪಡೆಗಳನ್ನು ಸಜ್ಜಾಗಿರಿಸಿದೆ ಎಂದು ವರದಿಯಾಗಿದೆ.
Discussion about this post