ಚಳ್ಳಕೆರೆ: ಪ್ರಸ್ತುತ ದಿನಗಳಲ್ಲಿ ವರದಿಗಾರರ ಮತ್ತು ಸಂಪಾದಕರ ಮೇಲೆ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಿದ್ದು ಈಗ ಸಂಪಾದಕರ ಮಟ್ಟಿಗೆ ಹೋಗಿರುವುದು ದುರಂತ. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು ತುರ್ತು ಪರಿಸ್ಥಿಯನ್ನು ನೆನಪಿಸುತ್ತಿದೆ. ಈ ಕೂಡಲೇ ಸರಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು, ಹಾಕಿರುವ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಚಳ್ಳಕೆರೆ ತಾಲೂಕು ಪತ್ರಕರ್ತರು ಆಗ್ರಹಿಸಿದ್ದಾರೆ.
ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ತುಷಾರ್ ಬಿ. ಹೊಸೂರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಇತ್ತಿಚೀಗೆ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಚುನಾವಣೆ ಫಲಿತಾಂಶ ಗೆಲುವು ತಂದು ಕೊಡಲಿಲ್ಲ. ಇದರ ಹಿನ್ನೆಲೆಯಲ್ಲೇ ನಡೆಸಿದ ವರದಿಯನ್ನು ಮೇ.25 ರಂದು ವಿಶ್ವವಾಣಿ ಮುಖಪುಟದಲ್ಲಿ ವಿಶ್ವಾಸಾರ್ಹ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ನಿಖಿಲ್ ರಂಪಾಟ ಮಾಡಿರುವ ಬಗ್ಗೆ ಸುದ್ದಿ ಮಾಡಲಾಗಿತ್ತು.
ಆದರೆ ಸುದ್ದಿಯಿಂದ ವಿಚಲಿತರಾದ ಕೆಲವರು ವಿಶ್ವವಾಣಿ ಸಿಬ್ಬಂದಿ ಹಾಗೂ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಮೇಲೆ ಆಕ್ರೋಶಗೊಂಡು ಪ್ರಕರಣ ದಾಖಲಿಸಿ ವಿವಿಧ ಸೆಕ್ಷನ್’ಗಳನ್ನು ಹಾಕಿರುವುದು ಅಕ್ಷಮ್ಯ ಅಪರಾಧ ಎಂದು ಚಳ್ಳಕೆರೆ ತಾಲೂಕು ಪತ್ರಕರ್ತರು ಕಿಡಿ ಕಾರಿದ್ದಾರೆ.
ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ 8 ಪ್ರಕರಣ ದಾಖಲು ಮಾಡಿರುವುದನ್ನು ನೋಡಿದರೆ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು ಸರಕಾರ ಈ ಕೂಡಲೇ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪತ್ರಕರ್ತರಾದ ಕೆ. ರಾಮಾಂಜನೇಯ ಆಗ್ರಹಿಸಿದ್ದಾರೆ.
ಪತ್ರಕರ್ತರಾದ ಬಿ.ವಿ. ಮಂಜುನಾಥ್, ಗೋಪನಹಳ್ಳಿ ಶಿವಣ್ಣ, ಕೊರ‌್ಲಕುಂಟೆ ತಿಪ್ಪೆಸ್ವಾಮಿ, ಬಿ. ಲೋಕೇಶ್, ಸಿ.ಪಿ. ರಂಗನಾಥ್, ಈಶ್ವರಪ್ಪ, ನಾವೇಲ್ಲಾ ಮಹೇಶ್, ರಾಮಾಂಜನೇಯ ಕೆ, ಬಷೀರ್ ಹಾಯತ್, ದ್ಯಾಮರಾಜು, ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post