ಬೆಂಗಳೂರು: ದೇಶದ್ರೋಹಿ ವಿದ್ಯಾರ್ಥಿ ಹಾಗೂ ವ್ಯಕ್ತಿಗಳಿಗೆ ಬಹಿರಂಗವಾಗಿ ಬೆಂಬಲ ನೀಡಿ, ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್(ರೈ)ಗೆ ಕಾಂಗ್ರೆಸ್ ತಡೆಯಲಾರದ ಮರ್ಮಾಘಾತ ನೀಡಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ಪ್ರಕಾಶ್ ರೈ, ಆನಂತರ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದರು. ಆದರೆ, ಕೈ ಪಕ್ಷ ರೈ ಅವರ ಕೈ ಹಿಡಿದಿಲ್ಲ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ಪ್ರಕಾಶ್ ರೈ ಈಗಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಿರುವಾದ ನಮ್ಮದು ರಾಷ್ಟಿಯ ಪಕ್ಷವಾದ ಕಾರಣ ಇವರಿಗೆ ಹೇಗೆ ಬೆಂಬಲ ಕೊಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ವಿಚಾರದಲ್ಲಿ ಸಿದ್ದರಾಮಯ್ಯ ಸಹ ಪ್ರಕಾಶ್ ರಾಜ್ ಬೆಂಬಲಕ್ಕೆ ನಿಂತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಬೆಂಬಲವಿಲ್ಲದೇ ಸ್ವತಂತ್ರವಾಗಿ ಹೋರಾಡಬೇಕಾದ ಅನಿವಾರ್ಯತೆ ರೈಗೆ ಎದುರಾಗಿದೆ.
ಈ ಕುರಿತಂತೆ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಹೊರತಾಗಿ ಎಲ್ಲ ಪಕ್ಷಗಳ ನಾಯಕರನ್ನು ರೈ ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಎಲ್ಲ ಕಡೆಯೂ ಇವರಿಗೆ ನಿರಾಶೆಯಾಗಿದೆ ಎನ್ನಲಾಗಿದೆ.
ಬೆಂಗಳೂರು ಸೆಂಟ್ರಲ್ ಬಿಜೆಪಿ ಭದ್ರಕೋಟೆಯಾಗಿದ್ದು, ಸದ್ಯ ಪಿ.ಸಿ. ಮೋಹನ್ ಇಲ್ಲಿನ ಸಂಸದರಾಗಿದ್ದಾರೆ. ಇವರ ಮುಂದೆ ಪ್ರಕಾಶ್ ರೈ ಏಕಾಂಗಿಯಾಗಿ ಹೋರಾಡುವ ಜೊತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೂ ಸಹ ಎದುರಿಸಬೇಕಾದ ಅನಿವಾರ್ಯತೆಯನ್ನು ಸ್ವತಃ ಅವರೇ ತಂದುಕೊಂಡಿದ್ದಾರೆ.
Discussion about this post