ಕಲ್ಪ ಮೀಡಿಯಾ ಹೌಸ್
ಸಾಗರ: ನಗರದಲ್ಲಿ ಅಬಕಾರಿ ಇನ್ಸಪೆಕ್ಟರ್ ಸಂದೀಪ್ ಅವರ ನೇತೃತ್ವದಲ್ಲಿ ನಗರದಲ್ಲಿ ಬೆಳೆದ ಗಾಂಜಾ ಗಿಡವನ್ನು ಮತ್ತು ಅರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ಸೊರಬ ರಸ್ತೆಯ ನಿವಾಸಿ ಚಂದನ್ ಎನ್ನುವವರ ಮನೆಯ ಮೇಲೆ ದಾಳಿ ಮಾಡಿ ಮನೆಯ ಹಿಂದೆ ಬೆಳೆದ ಒಂದು ಕೆಜಿ ಇನ್ನೂರು ಗ್ರಾಂ ತೂಕದ ಎಂಟು ಅಡಿ ಎತ್ತರದ ಗಾಂಜಾ ಗಿಡ ವಶಪಡಿಸಿಕೊಂಡು ಎ ಸಿ ಟಿ 1985 ರ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಸಂತೋಷ್ ಸಿಬ್ಬಂದಿಗಳಾದ ಗುರುಮೂರ್ತಿ, ಮೂದಾಸಿರ್, ಗಣಪತಿ ದೀಪಕ್ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















