ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಬಿಜೆಪಿ ಐತಿಹಾಸಿಕ ಸಾಧನೆ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ತಮಿಳುನಾಡಿನಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯಲಿದ್ದು, ಮೊದಲ ಬಾರಿಗೇ 10 ಸ್ಥಾನವನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಪ್ರಮುಖವಾಗಿ ಕಳೆದ ಮೂರು ಚುನಾವಣೆಗಳಲ್ಲಿ ನಿಖರ ಸಮೀಕ್ಷಾ ವರದಿ ನೀಡಿದ್ದ ಟುಡೇಸ್ ಚಾಣಕ್ಯ ವರದಿ ಬಿಡುಗಡೆ ಮಾಡಿದೆ. ಇದರ ವರದಿಯಂತೆ ತಮಿಳುನಾಡಿನಲ್ಲಿ ಬಿಜೆಪಿ 10, ಎಐಡಿಎಂಕೆ: 0-2, ಡಿಎಂಕೆ: 29, ಇತರೆ: 00 ಪಡೆಯಲಿವೆ.
ಯಾವ ಸಮೀಕ್ಷೆ ಏನು ಹೇಳಿದೆ?
- ಇಂಡಿಯಾ ಟಿವಿ: ಬಿಜೆಪಿ: 5-7, ಡಿಎಂಕೆ: 16-18, ಕಾಂಗ್ರೆಸ್: 6-8, ಎಐಡಿಎಂಕೆ: 0-1, ಇತರೆ: 8-1
- ಇಂಡಿಯಾ ಟುಡೆ: ಬಿಜೆಪಿ: 1-3, ಐಎನ್’ಡಿಐಎ: 26-30, ಎಐಡಿಎಂಕೆ 0-2, ಇತರೆ: 00
- ಸಿ – ವೋಟರ್: ಬಿಜೆಪಿ – 1, ಐಎನ್’ಡಿಐಎ: 37-39, ಇತರೆ: 00
- ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ – 1, ಐಎನ್’ಡಿಐಎ: 33-37, ಇತರೆ: 00
ಈ ಬಾರಿ ಅಣ್ಣಾಮಲೈ ಕಮಾಲ್
ಅಣ್ಣಾಮಲೈ ಅವರು ತಮಿಳುನಾಡು ರಾಜ್ಯಾಧ್ಯಕ್ಷರಾದ ನಂತರ ಅಲ್ಲಿ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆಗೆ ರಾಜ್ಯ ಬಿಜೆಪಿ ಘಟಕ ನಿರಂತರವಾಗಿ ವ್ಯಾಪಕ ಪ್ರಚಾರ ನಡೆಸಿತ್ತು.
ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 7 ಬಾರಿ ತಮಿಳುನಾಡಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಅಲ್ಲದೇ ಸೆಂಗೋಲ್ ರಾಜದಂಡ, ಕಚ್ಚತೀವು ವಿಚಾರಗಳನ್ನ ಪದೇ ಪದೇ ಒತ್ತಿ ಹೇಳಿದ್ದರು. ಈ ಅಂಶಗಳೂ ಸೇರಿದಂತೆ ಕೇಂದ್ರದ ಜನಪರ ಕಾರ್ಯಗಳು ಬಿಜೆಪಿಗೆ ತಮಿಳುನಾಡಿನಲ್ಲಿ ವರದಾನವಾಗಲಿವೆ ಎಂದು ಹೇಳಲಾಗಿದೆ.
ಸಮೀಕ್ಷಾ ವರದಿಗಳಂತೆ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಗೆದ್ದರೆ ಅದು ದೇಶದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಲ್ಲದೇ, ಆ ಸಾಧನೆಯ ಪ್ರಮುಖ ರೂವಾರಿ ಅಣ್ಣಾಮಲೈ ಅವರೇ ಆಗಿರಲಿದ್ದಾರೆ.
2019ರ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ ಡಿಎಂಕೆ 38 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್’ಡಿಎ ಕೂಟ ತೀವ್ರ ಪ್ರತಿರೋಧ ಎದುರಿಸಿತ್ತು. ಆದರೆ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ ಎಂಬ ಅಂಕಿ ಅಂಶಗಳನ್ನು ಚುನಾವಣೋತ್ತರ ಸಮೀಕ್ಷೆಗಳು ತೆರೆದಿಟ್ಟಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post