ಮುಂಬೈ: ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯವಾಗಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಭರ್ಜರಿ ಜಯ ನಿಶ್ಚಿತ ಎಂಬ ವರದಿಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಗಗನಕ್ಕೇರಿದೆ.
ಇಂದು ಷೇರು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್’ನಲ್ಲಿ ಏರಿಕೆ ಕಂಡು ಬಂದಿತ್ತು. ಬೆಳಗ್ಗೆ 10 ಗಂಟೆ ವೇಳೆಗೆ 845.33 ಅಂಕ ಏರಿಕೆಯಾಗಿದ್ದು, ಸೆನ್ಸೆಕ್ಸ್ 38,776.10ಗೆ ತಲುಪಿತ್ತು. ನಿಫ್ಟಿ ಸಹ ಏರಿಕೆ ದಾಖಲಿಸಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ 246.5 ಅಂಕ ಏರಿಕೆ ಕಂಡು 11,653.65 ತಲುಪಿತ್ತು.
ಮಾರುತಿ, ಎಲ್ ಆಂಡ್ ಟಿ, ಎಸ್’ಬಿಐ, ಐಸಿಐಸಿಐ ಬ್ಯಾಂಕ್, ಆರ್’ಐಎಲ್, ಎಂ ಆಂಡ್ ಎಂ, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ವೇದಾಂತ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳಲ್ಲಿ ಶೇ. 4 ಏರಿಕೆ ಆಗಿದ್ದರೆ, ಮತ್ತೊಂದೆಡೆ ಬಜಾಜ್ ಆಟೋ, ಇನ್ಫೋಸಿಸ್ ಮತ್ತು ಎಚ್ ಸಿಎಲ್ ಟೆಕ್ ಶೇ. 2ರಷ್ಟು ಏರಿಕೆ ದಾಖಲಿಸಿದೆ.
ಇದೇ ವೇಳೆ ಡಾಲರ್ ಎದುರು ರೂಪಾಯಿ ಏರಿಕೆ ಕಂಡು ಬಂದಿದ್ದು,ರೂಪಾಯಿ ಮೌಲ್ಯ 79 ಪೈಸೆ ಏರಿದೆ. ಈ ಮೂಲಕ ಡಾಲರ್ ಎದುರು ರೂಪಾಯಿ ಮೌಲ್ಯ 69.44 ಗೆ ತಲುಪಿದೆ.
Discussion about this post