ನವದೆಹಲಿ: ಸಾಮಾಜಿಕ ಜಾಲತಾಣಗಳ ಪ್ರಮುಖ ವೇದಿಕೆ ಫೇಸ್’ಬುಕ್, ವಾಟ್ಸಪ್, ಮೆಸೆಂಜರ್ ಹಾಗೂ ಇಸ್ಟ್ರಾಗ್ರಾಂನ ಕೋಟ್ಯಂತರ ಖಾತೆಗಳು ನಿನ್ನೆ ರಾತ್ರಿಯಿಂದ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬುದನ್ನು ಕಂಪೆನಿಗಳು ಒಪ್ಪಿಕೊಂಡಿದ್ದು, ಶೀಘ್ರ ಈ ಸಮಸ್ಯೆಯನ್ನು ಪರಿಹಾರ ಮಾಡಲಾಗುವುದು ಎಂದಿದೆ.
ಪ್ರಮುಖವಾಗಿ, ಫೇಸ್’ಬುಕ್ ಖಾತೆಗಳ ಬಳಕೆಯಲ್ಲಿ ಕೋಟ್ಯಂತರ ಮಂದಿಗೆ ರಾತ್ರಿಯಿಂದ ತೊಂದರೆಯಾಗಿರುವುದನ್ನು ಕಂಪೆನಿ ಒಪ್ಪಿಕೊಂಡಿದ್ದರೂ, ಯಾವ ಕಾರಣಕ್ಕಾಗಿ ಹೀಗೆ ಆಗಿದೆ ಎಂಬುದು ತಿಳಿದಿಲ್ಲ. ಇದರ ವಿಚಾರದಲ್ಲಿ ನಮ್ಮ ತಂಡ ಕೆಲಸ ಮಾಡುತ್ತಿದ್ದು, ಶೀಘ್ರ ಇದನ್ನು ಪರಿಹಾರ ಮಾಡುತ್ತೇವೆ ಎಂದಿದೆ.
ಮೇಲ್ನೋಟಕ್ಕೆ ಇದೊಂದು ಗಂಭೀರ ಸಮಸ್ಯೆ ಎಂದು ನಮಗೆ ಅನಿಸುತ್ತಿದ್ದು, ಡಿಡಿಒಎಸ್ ಸಮಸ್ಯೆ ಕಾಣಿಸಿಕೊಂಡಿರುವಂತಿದೆ. ಖಾತೆಗಳ ಬಳಕೆಯಲ್ಲಿ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ನಮಗೆ ಬಹಳಷ್ಟು ದೂರುಗಳು ಬಂದಿವೆ. ಇದನ್ನು ಪರಿಹಾರ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದೆ.
ಇದೇ ವೇಳೆ #FacebookDown and #InstagramDown ಎಂಬ ಹ್ಯಾಶ್ ಟ್ಯಾಗ್ ಆರಂಭವಾಗಿದ್ದು, ಸಮಸ್ಯೆ ಉಲ್ಬಣವಾಗಿರುವುದಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
When Facebook and Instagram are down at the same time and content floods Twitter #FacebookDown #instagramdown pic.twitter.com/OTD8B9A1JA
— Ad Age (@adage) March 13, 2019
when you decided to reinstall instagram to fix the issue now you can’t even sign back in #instagramdown pic.twitter.com/eDMkrKMxDu
— paul (@AchieveUnagi) March 13, 2019
Me to myself after logging out of Instagram to fix the problem but now it won’t even let me sign back in #instagramdown pic.twitter.com/DTIczBpzUe
— Harry J Mellor (@harrymellor13) March 13, 2019
Discussion about this post