ವಾಷಿಂಗ್ಟನ್: ಫನಿ ಚಂಡಮಾರುತದ್ದ ಅಬ್ಬರಕ್ಕೆ ಭಾರತದಲ್ಲಿ ಹಲವರು ಬಲಿಯಾಗಿರುವ ಬೆನ್ನಲ್ಲೇ, ದೊಡ್ಡ ಮಟ್ಟದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತಾಗಿ ವಿಶ್ವಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗ ಸಾಮಾನ್ಯ ಕಾರ್ಯದರ್ಶಿ ಮಾಮಿ ಮಿಜುಟೋರಿ, ಅತ್ಯಂತ ಕ್ಲಿಷ್ಟಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭಾರತದ ಶೂನ್ಯ ಸಾವು-ನೋವು ವಿಧಾನವನ್ನು ವಿಶ್ವಸಂಸ್ಥೆ ಶ್ವಾಘಿಸುತ್ತದೆ. ಭಾರತ ಸೂಕ್ತ ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ಘೋರ ಪರಿಸ್ಥಿಯಲ್ಲೂ ಅತ್ಯಂತ ಕಡಿಮೆ ಸಾವುನೋವು ಸಂಭವಿಸಿದೆ. ಖಂಡಿತ ಭಾರತದ ಕಾರ್ಯ ಶ್ಲಾಘನೀಯ ಎಂದಿದ್ದಾರೆ.
India's 'zero casualty' policy, pinpoint warnings minimised #CycloneFani deaths #ResilienceForAll https://t.co/9z4tR7iegH via @economictimes
— UNDRR (@unisdr) May 4, 2019
ಸೂಕ್ತ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಪ್ರಾಣಹಾನಿ ಕಡಿಮೆ ಮಾಡಿದ್ದಕ್ಕಾಗಿ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಕಳೆದ 20 ವರ್ಷಗಳಲ್ಲೇ ಅತ್ಯಂತ ಘೋರ ಎನ್ನಲಾದ ಫನಿ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದರೆ, ಸಾವಿರಾರು ಮಂದಿ ಬಲಿಯಾಗುವ ಸಾಧ್ಯತೆಯಿತ್ತು. ಆದರೆ, ವಿಶ್ವಸಂಸ್ಥೆಯ ವಿಪತ್ತು ನಿರ್ವಹಣಾ ನಿಯಮಗಳನ್ನು ಅನುಸರಿಸುವ ಮೂಲಕ ಸರ್ಕಾರಗಳು ಭಾರಿ ಅನಾಹುತ ತಪ್ಪಿಸಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Discussion about this post