ಬೆಂಗಳೂರು: ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀ ರಾಮದೇವರ ಕುರಿತಾಗಿ ಅವಹೇಳನಕಾರಿಯಾಗಿ ಅವಹೇಳನಕಾರಿಯಾಗಿ ಬರೆದಿರುವ ಕೆ.ಎಸ್. ಭಗವಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಯಾವುದೇ ವೇಳೆಯಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಗಿರೀಶ್ ಭಾರದ್ವಾಜ್ ಅವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಗವಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಮ ಮಂದಿರ ಏಕೆ ಬೇಡ ಎಂಬ ಪುಸ್ತಕ ಬರೆದಿರುವ ಭಗವಾನ್, ಪ್ರಭು ಶ್ರೀ ರಾಮ ಒಬ್ಬ ಕುಡುಕ, ರಾಮ ಸೀತೆ ಮಧ್ಯಪಾನ ಮಾಡುತ್ತಿದ್ದರು, ರಾಮ ತನ್ನ ಕೈಯಿಂದ ಸೀತೆಗೆ ಮಧ್ಯಪಾನ ಮಾಡಿಸುತ್ತಿದ್ದ, ರಾಮ ಹುಡುಗಿಯರ ಜೊತೆ ಕುಡಿದ ನೃತ್ಯ ಮಾಡಿ ಅವರನ್ನು ಸಂತೋಷ ಪಡಿಸುತ್ತಿದ್ದ, ರಾಮನೊಬ್ಬ ಕೊಲೆಗಡುಕ ಎಂದೆಲ್ಲಾ ಬರೆದಿದ್ದಾರೆ. ಭಗವಾನ್ ಅವರ ಈ ಬರಹದಿಂದ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಹೀಗಾಗಿ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಭಾರದ್ವಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು, ಗಿರೀಶ್ ಅವರ ದೂರನ್ನು ಆಧರಿಸಿ ಐಪಿಸಿ 1860(295ಎ) ಅಡಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಭಗವಾನ್ ಅವರನ್ನು ಬಂಧಿಸಿ, ನಾಳೆ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Discussion about this post