ಕಲ್ಪ ಮೀಡಿಯಾ ಹೌಸ್
ನವದೆಹಲಿ: ಮಾರಕ ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದಾಗಿ ದೇಶದಲ್ಲಿ ಮೊದಲ ಬಲಿಯಾಗಿದ್ದು, ಇದನ್ನು ಸರ್ಕಾರಿ ಸಮಿತಿ ದೃಢಪಡಿಸಿದೆ.
ಈ ಕುರಿತಂತೆ ರಾಷ್ಟ್ರೀಯ ಎಐಎಫ್’ಐ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಲಸಿಕೆ ಪಡೆದ ನಂತರ ವ್ಯಕ್ತಿಯಲ್ಲಿ ಅಡ್ಡಪರಿಣಾಮವಾಗಿ ಅನಾಫಿಲ್ಯಾಕ್ಸಿಸ್(ತೀವ್ರ ಅಲರ್ಜಿ ಪರಿಣಾಮ) ಗೆ ಗುರಿಯಾಗಿದ್ದು ಇದರಿಂದಲೇ 2021ರ ಮಾರ್ಚ್ 8ರಂದು ಮೃತಪಟ್ಟಿರುವುದಾಗಿ ಹೇಳಿದೆ.
ಇನ್ನು ಜ. 16 ಮತ್ತು 19ರಂದು ಲಸಿಕೆ ಪಡೆದಿದ್ದ ಇಬ್ಬರಿಗೂ ತೀವ್ರ ಅಲರ್ಜಿಯಾಗಿದ್ದು ಕೂಡಲೇ ಅವರು ಆಸ್ಪತ್ರೆಗೆ ದಾಖಲಾದ ನಂತರ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಂದರ್ಭಿಕವಾಗಿ ಮೌಲ್ಯಮಾಪನ ಮಾಡಲಾದ 31 ಪ್ರಕರಣಗಳಲ್ಲಿ 18 ಸಾವುಗಳು ಲಸಿಕೆ ಪಡೆದ ನಂತರ ಸಾಂದರ್ಭಿಕವಾಗಿ, ಅಂದರೆ ಕಾಕತಾಳೀಯವಾಗಿ ಸಂಭವಿಸಿದೆ. ಇದಕ್ಕೂ ಲಸಿಕೆಗೂ ಸಂಬಂಧವಿಲ್ಲ. ಇನ್ನು ಏಳು ಸಾವುಗಳು ಎರಡೂ ಕಾರಣಗಳಿಗೆ ಸಂಭವಿಸಿದೆ. ಇನ್ನು ಮೂರು ಸಾವುಗಳು ಲಸಿಕೆಯಿಂದಾಗಿದೆ ಎಂದು ತಿಳಿದುಬಂದಿದ್ದು ಒಂದು ಸಾವು ಉದ್ವೇಗದಿಂದಾಗಿದ್ದರೆ ಮತ್ತೇರಡು ಪ್ರಕರಣಗಳನ್ನು ವರ್ಗಿಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿ ತಿಳಿಸಿರುವುದಾಗಿ ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post