ನವದೆಹಲಿ: ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಗಳನ್ನು ಮುಂದಿನ ಏಳು ದಿನಗಳ ಒಳಗಾಗಿ ಖಾಲಿ ಮಾಡಬೇಕು ಎಂದು ಎಲ್ಲ ಮಾಜಿ ಎಂಪಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಕುರಿತಂತೆ ಎಲ್ಲ ಮಾಜಿ ಎಂಪಿಗಳಿಗೆ ಸೂಚನೆ ನೀಡಿರುವ ವಸತಿ ಸಮಿತಿ ಅಧ್ಯಕ್ಷ ಚಂದ್ರಕಾಂತ್, ಎಲ್ಲ ಮಾಜಿ ಸಂಸದರು ತಮ್ಮ ಸರ್ಕಾರಿ ವಸತಿಗೃಹಗಳನ್ನು ಕಡ್ಡಾಯವಾಗಿ ಖಾಲಿ ಮಾಡಬೇಕು. ಅಲ್ಲದೇ, ಮೂರು ದಿನಗಳ ಒಳಗಾಗಿ ಈ ವಸತಿಗೃಹಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತಗೊಳಿಸಲೂ ಸಹ ಸೂಚಿಸಿದ್ದೇವೆ ಎಂದಿದ್ದಾರೆ.
ಯಾವುದೇ ಸಂಸದರು ಚುನಾವಣೆಯಲ್ಲಿ ಮರುಆಯ್ಕೆಗೊಳ್ಳದೇ ಇದ್ದರೆ 30 ದಿನದ ಒಳಗಾಗಿ ಸರ್ಕಾರ ನೀಡಿರುವ ವಸತಿಗೃಹಗಳನ್ನು ಖಾಲಿ ಮಾಡಬೇಕು. ಆದರೆ, ಚುನಾವಣೆ ನಡೆದು ಹೊಸ ಸರ್ಕಾರ ಬಂದು ಮೂರು ತಿಂಗಳಾದರೂ ಸುಮಾರು 55-60 ಸಂಸದರು ಬಂಗಲೆ ಖಾಲಿ ಮಾಡಿಲ್ಲ. ಇದು, ಹೊಸ ಸಂಸದರಿಗೆ ವಸತಿ ವ್ಯವಸ್ಥೆ ಮಾಡಲು ಆಡಳಿತ ವರ್ಗಕ್ಕೆ ತಲೆನೋವಾಗಿದೆ. ಹೀಗಾಗಿ, ಈ ಸೂಚನೆ ನೀಡಿದ್ದೇವೆ ಎಂದಿದ್ದಾರೆ.
Discussion about this post