ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ರೋಗ ನಿಯಂತ್ರಣಕ್ಕಾಗಿ ಸರ್ಕಾರ ಘೋಷಿಸಿರುವ ಭಾರತ್ ಬಂದ್’ನಿಂದಾಗಿ ಕಡುಬಡವರು ಊಟ ತಿಂಡಿಯಿಲ್ಲದೆ ನರಳಬಾರದೆಂಬ ಉದ್ಧೇಶದಿಂದ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಿರುವುದಾಗಿ ಘೋಷಿಸಿದೆ.
ಆದರೆ ಸರ್ಕಾರಿ ಮುಖ್ಯಬಸ್ ನಿಲ್ದಾಣ ಹಾಗೂ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್’ಗಳಲ್ಲಿ ಹಣ ಪಡೆದು ಊಟ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸೋಮಶೇಖರ್ ಹಾಗೂ ಪೌರಾಯುಕ್ತ ಮನೋಹರ್ ಸಂತೆ ಮೈದಾನದ ಇಂದಿರಾ ಕ್ಯಾಂಟೀನ್’ಗೆ ಭೇಟಿ ನೀಡಿ ಅಡುಗೆ ಮತ್ತು ತೂಕ ಪರಿಶೀಲಿಸಿ ಬಡವರಿಗೆ ಹಣ ಪಡೆಯದೆ ಉಚಿತವಾಗಿ ಊಟವನ್ನು ನೀಡಬೇಕೆಂದು ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ನಗರಸಭೆ ಕಂದಾಯಾಧಿಕಾರಿ ರಾಜಕುಮಾರ್, ಪರಿಸರ ಇಂಜಿನಿಯರ್ ರುದ್ರೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್ ಮುಂತಾದವದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post