ಕಲ್ಪ ಮೀಡಿಯಾ ಹೌಸ್ | ಗದಗ |
ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಸಂಕೇತವಾಗಿರುವ ‘ಪಟ್ಟೇದ ಅಂಚು’ ಸೀರೆಗೆ #Patteda Anchu Saree ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ. ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಈ ಟ್ಯಾಗ್ ದೊರಕಿದೆ.
ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ (ಆರ್‌ಸಿಐಪಿಆರ್) ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಿಂದ (ವಿಟಿಪಿಸಿ) ಜಿಐ ಟ್ಯಾಗ್ ನೋಂದಣಿ ಮಾಡಲಾಗಿದೆ.
ಉತ್ತರ ಕರ್ನಾಟಕದ ಇಳಕಲ್, ಬೆಟಗೇರಿ, ಗಜೇಂದ್ರಗಡ ಮತ್ತು ಇತರ ಭಾಗಗಳಿಂದ ಬರುವ ಸಾಂಪ್ರದಾಯಿಕ ಕೈಮಗ್ಗ ಸೀರೆಗಳು ಮಹಿಳೆಯರಲ್ಲಿ, ವಿಶೇಷವಾಗಿ ಮದುವೆಯ ಋತುವಿನಲ್ಲಿ ಭಾರಿ ಆಕರ್ಷಣೆಯಾಗಿದೆ ಮತ್ತು ಈ ಮನ್ನಣೆಯು ನುರಿತ ನೇಕಾರರು ವೃತ್ತಿಯನ್ನು ಮುಂದುವರಿಸಲು ಸಹಕಾರಿಯಾಗಿದೆ.
ನಮ್ಮ ಪಟ್ಟೇದ ಅಂಚು ಸೀರೆಗಳಿಗೆ ಭೌಗೋಳಿಕ ಸೂಚನಾ ಟ್ಯಾಗ್ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ ಎಂದು ಗಜೇಂದ್ರಗಡದ ನೇಕಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post