ಕಲ್ಪ ಮೀಡಿಯಾ ಹೌಸ್ | ಗದಗ |
ರಾಜ್ಯದಲ್ಲಿ ವಕ್ಫ್ ಆಟಾಟೋಪ ನಿಲ್ಲುವಂತೆ ಕಾಣುತ್ತಿಲ್ಲ. ಈವರೆಗೂ ಖಾಸಗೀ ಜಮೀನುಗಳನ್ನು ತನ್ನದೆಂದು ಹೇಳುತ್ತಿದ್ದ ಈ ಸಂಸ್ಥೆ, ಈಗ ಗದಗದ 500 ವರ್ಷಗಳ ಇತಿಹಾಸವಿರುವ ಅನ್ನದಾನೇಶ್ವರ ಮಠದ ಭೋಜನಶಾಲೆ (ಪ್ರಸಾದ ನಿಲಯ), ಕೃಷಿಭೂಮಿ ಹಾಗೂ ಸ್ಮಶಾನ ವಕ್ಫ್ ಆಸ್ತಿಯಾಗಿರುವುದು ಬೆಳಕಿಗೆ ಬಂದಿದೆ.
ನರೇಗಲ್ ಪಟ್ಟಣದ ಮಠದ ಸಭಾಂಗಣ, ನರೇಗಲ್ ಬಳಿ ಸುಮಾರು 50 ಎಕರೆ ಜಮೀನು, ಸ್ಮಶಾನವಾಗಿದ್ದ ಹುಣಸಿಕಟ್ಟಿ ಗ್ರಾಮದ ಕಂದಾಯ ಇಲಾಖೆ ಜಮೀನು ವಕ್ಫ್ ಭೂಮಿಯಾಗಿ ಪರಿವರ್ತನೆಗೊಂಡಿರುವ ವಿಷಯ ಹಲವು ರೈತರಿಂದ ತಿಳಿದು ಬಂದಿದೆ.

Also read: ಭಾರತದ ಇಬ್ಬರು ವಿಡಿಜಿ ಸಿಬ್ಬಂದಿಗಳನ್ನು ಕಿಡ್ನಾಪ್ ಮಾಡಿ ಗಲ್ಲಿಗೇರಿಸಿದ ಭಯೋತ್ಪಾದಕರು
ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಗ್ರಾಮಸ್ಥರು ಹಾಗೂ ನಿವಾಸಿಗಳು ತಮ್ಮ ಜಮೀನಿನ ದಾಖಲೆ ಪರಿಶೀಲಿಸಲು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡುತ್ತಿದ್ದಾರೆ.

ಅನೇಕ ರೈತರು ತಮ್ಮ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಮತ್ತು ವಕ್ಫ್ ಆಸ್ತಿ ದಾಖಲೆಗಳ ವಿಷಯ ತಮ್ಮ ಜೀವನೋಪಾಯಕ್ಕಾಗಿ ಸಣ್ಣ ಜಮೀನುಗಳನ್ನು ಅವಲಂಬಿಸಿರುವವರಲ್ಲಿ ಭಯದ ಭಾವನೆ ಮೂಡಿಸಿದೆ.

ಭೂ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಿರುವುದರಿಂದ ಸರ್ಕಾರದ ಯೋಜನೆಗಳಿಂದ ಯಾರೂ ಪ್ರಯೋಜನ ಪಡೆಯುತ್ತಿಲ್ಲ ಅಥವಾ ತಮ್ಮ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post