ಕಲ್ಪ ಮೀಡಿಯಾ ಹೌಸ್ | ಗಾಂಧಿನಗರ |
ಅಯೋಧ್ಯೆ ರಾಮಮಂದಿರ Ayodhye Rama Mandira ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದ ಉದ್ಯಮಿ, ಸಮಾಜ ಸೇವಕ ಗೋವಿಂದ್ ಧೊಲಾಕಿಯಾ ಅವರಿಗೆ ಬಿಜೆಪಿ ಗುಜರಾತ್’ನಿಂದ ರಾಜ್ಯಸಭೆಗೆ ಟಿಕೇಟ್ ನೀಡಿದೆ.
2011ರಲ್ಲಿ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದ ಗೋವಿಂದ್, ಅವರು ಸೂರತ್ ಮೂಲದ ವಜ್ರ ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿಯಾದ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.
ಸೂರತ್’ನಲ್ಲಿ ಮೊದಲ ಬಾರಿಗೆ ವಜ್ರ ಉದ್ಯಮವು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ. ವಿನಮ್ರ ಹಿನ್ನೆಲೆಯಿಂದ ಡೈಮಂಡ್ ಉದ್ಯಮಿಯಾಗುವವರೆಗೆ ಗೋವಿಂದ್ ಧೋಲಾಕಿಯಾ ಅವರ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಕಡುಬಡತನದಲ್ಲಿ ಬಾಲ್ಯ ಕಳೆದಿದ್ದ ಇವರು ಈಗ ದೊಡ್ಡ ಉದ್ಯಮಿಯಾಗಿ ಹೊರ ಹೊಮ್ಮಿದ್ದು ವಿಶ್ವದ ಅತಿ ದೊಡ್ಡ ವಜ್ರ ಕಂಪನಿಗಳಲ್ಲಿ ಇವರ ಕಂಪನಿಯೂ ಒಂದಾಗಿದೆ.
Also read: ಸಿಲಿಕಾನ್ ಸಿಟಿಯಲ್ಲಿ ಎರಡು ಪಿಟ್ ಬುಲ್ ನಾಯಿ ದಾಳಿ | ವರ್ತೂರು ನಿವಾಸಿಗೆ ಗಂಭೀರ ಗಾಯ
ಈ ಕುರಿತಂತೆ ಮಾತನಾಡಿದ ಅವರು, ರೈತ ಕುಟುಂಬದಿAದ ನಾನು ಬಂದಿದ್ದೇನೆ. ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ನಾಲ್ಕು ಗಂಟೆಗಳ ಮೊದಲು ನನ್ನ ನಾಮನಿರ್ದೇಶನದ ಬಗ್ಗೆ ನನಗೆ ತಿಳಿಯಿತು. ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕತ್ವವು ಖಂಡಿತವಾಗಿಯೂ ಚಿಂತನೆ ನಡೆಸಿರಬೇಕು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















