ಗೌರಿಬಿದನೂರು: ತಾಲೂಕಿನ ಗರಗೆರೆ ಹೋಬಳಿಯಲ್ಲಿರುವ ಆಂಧ್ರದ ಗಡಿ ಭಾಗದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 4 ಮಂದಿ ಹೊರ ರಾಜ್ಯದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚಿನ ಕೆಲವು ದಿನಗಳಿಂದ ಗಡಿ ಭಾಗದ ಮೇಳ್ಯಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೆಲವು ಗ್ರಾಮಗಳಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಥಳೀಯರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಮೇರೆಗೆ ಸಿಪಿಐ ಎಸ್. ರವಿ ಹಾಗೂ ಪಿಎಸ್‌ಐ ಎನ್. ಮೋಹನ್ ಅವರ ಮಾರ್ಗದರ್ಶನದಲ್ಲಿ ರಾತ್ರಿ ಪಾಳಯದ ಗಸ್ತು ಪೊಲೀಸರನ್ನು ನೇಮಕ ಮಾಡಿದ್ದರು. ಇವರು ಮಂಗಳವಾರ ರಾತ್ರಿ ಗಡಿ ಭಾಗದಲ್ಲಿ ಕಾವಲಿದ್ದ ವೇಳೆ ಆಂಧ್ರದ ಕಡೆಯಿಂದ ಎರಡು ದ್ವಿಚಕ್ರ ವಾಹನದಲ್ಲಿ ನಾಲ್ವರು ಒಂದು ನಾಡ ಬಂದೂಕಿನ ಸಮೇತವಾಗಿ ಬೇಟೆಗೆ ಹೋಗುತ್ತಿದ್ದುದನ್ನು ಕಂಡು ಅವರನ್ನು ವಿಚಾರಣೆ ಮಾಡಿ ಬಂದಿಸಿದ್ದಾರೆ.
ಬಂಧಿತ ಆರೋಪಿಗಳು ರಾಜಣ್ಣ (40), ಮುನಿರಾಜು (25), ದೇವರಾಜು (30) ಹಾಗೂ ಮುನಿರಾಜು (29) ಎಂದು ತಿಳಿದುಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093, 94487 22200
Discussion about this post