ಗೌರಿಬಿದನೂರು: ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆಗಳಾಗಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳಬೇಕಾಗಿದೆ ಎಂದು ಸಿಆರ್ ಪಿ.ಎಸ್. ರವಿಕುಮಾರ್ ತಿಳಿಸಿದರು.
ತಾಲೂಕಿನ ಅಲಕಾಪುರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಜಗದೀಶ್ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳು ಕಲಿಕಾ ಹಂತದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಪಡೆಯಬೇಕಾಗಿದೆ. ಇದರಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ. ಇದು ಅವರ ಭವಿಷ್ಯಕ್ಕೆ ಆಸರೆಯಾಗಿ ಉಜ್ವಲವಾದ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬೆಂಗಳೂರಿನ ಶ್ರೀವೆಂಕಟೇಶ್ವರ ಅಕಾಡೆಮಿಯ ಮುಖ್ಯಸ್ಥರಾದ ಟಿ.ಬಿ. ವೆಂಕಟೇಶ ರೆಡ್ಡಿ ಬಹುಮಾನಗಳ ಪ್ರಾಯೋಜಕತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಜೀಮಾ ಬೇಗಂ, ವೈದ್ಯಾಧಿಕಾರಿ ಕೀರ್ತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎನ್. ನಂಜುಂಡರಾವ್ ಹಾಗೂ ಸಿಬ್ಬಂದಿ ವರ್ಗ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಭಾರತಿ, ಜ್ಞಾನೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಮೌಳಿ, ಜೈನೇಬಿಯಾ ಶಾಲೆಯ ಮುಖ್ಯಸ್ಥರಾದ ಗುಲ್ತಾರ್ ಜೆಹರಾ, ಮುಖಂಡರಾದ ಆರ್.ಪಿ. ಗೋಪಾಲಗೌಡ, ಪ್ರಭಾಕರ್, ನಭೀ, ನಾಗರತ್ನಮ್ಮ, ನಾಗರಾಜು, ಶಿಕ್ಷಕರಾದ ಪದ್ಮಪ್ರಭ, ಎಸ್.ಎನ್. ನರಸೇಗೌಡ, ಎನ್.ಆರ್. ಮಂಜುನಾಥ್, ರಾಂಬಾಬು, ವಿಜಯಕುಮಾರ್, ಗುರುಬಸವಯ್ಯ, ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಿಕ್ಷಕರು, ಎಸ್”ಡಿಎಂಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post