ಗೌರಿಬಿದನೂರು: ನಗರದ 22 ನೆಯ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಮುಷೀರ್ ಅಹಮದ್ ಮತ್ತು ಗಜೇಂದ್ರ ಹಾಗೂ ಬಿಜೆಪಿ ಮುಖಂಡರಾದ ನರಸಿಂಹಪ್ಪ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಸಿ. ಮಂಜುನಾಥರೆಡ್ಡಿ ನೇತೃತ್ವದಲ್ಲಿ ಜೆಡಿಎಸ್’ಗೆ ಸೇರ್ಪಡೆಯಾಗಿದ್ದಾರೆ.
ಬಳಿಕ ಮಾತನಾಡಿದ ಸಿ. ಮಂಜುನಾಥ ರೆಡ್ಡಿ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಎಲ್ಲಾ ವಾರ್ಡ್’ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಬಹುತೇಕ ವಾರ್ಡ್’ಗಳಲ್ಲಿ ಉತ್ತಮ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಇದರಿಂದ ಅನ್ಯ ಪಕ್ಷದ ಮುಖಂಡರುಗಳು ಚುನಾವಣೆಯ ಆರಂಭದಲ್ಲಿಯೇ ಸ್ವಪ್ರೇರಣೆಯಿಂದ ಜೆಡಿಎಸ್’ಗೆ ಬಂದು ಸೇರುತ್ತಿರುವುದು ಸ್ವಾಗತಾರ್ಹವಾಗಿದೆ. ಪಕ್ಷದಲ್ಲಿ ಎಲ್ಲಾ ವರ್ಗದ ಜನತೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಲು ಮುಕ್ತ ಅವಕಾಶವಿದೆ. ಜೊತೆಗೆ ಪಕ್ಷದ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಉತ್ತಮ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಉಜ್ವಲವಾದ ಭವಿಷ್ಯವನ್ನು ಕಾಣಬಹುದಾಗಿದೆ ಎಂದರು.
ಮುಖಂಡರಾದ ಸಿ.ಆರ್. ನರಸಿಂಹಮೂರ್ತಿ ಮಾತನಾಡಿ, ಪಕ್ಷವು ಜನಪರವಾದ ನಿಲುವನ್ನು ತೋರುವ ಜೊತೆಗೆ ಸದಾ ಅವರ ಸೇವೆಯಲ್ಲಿಯೇ ನಿಂತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನತೆ ನೀಡಿದ ನಿಸ್ವಾರ್ಥ ಸೇವೆಗೆ ಎಲ್ಲರೂ ಅಭಾರಿಗಳಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಆದ್ದರಿಂದ ಪಕ್ಷದ ಸಿದ್ಧಾಂತ ಹಾಗೂ ತತ್ವಗಳನ್ನು ಮೆಚ್ಚಿ ಬರುವ ಪ್ರತಿಯೊಬ್ಬರಿಗೂ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಎಸ್. ಅನಂತರಾಜು, ಬೇಗ್, ಪ್ರಸನ್ನ ಕುಮಾರ್, ಮಂಜುನಾಥ್, ನಟರಾಜ್, ಶ್ರೀನಿವಾಸ್ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093, 94487 22200
Discussion about this post