ಗೌರಿಬಿದನೂರು: ರೈತರು ಬೆಳೆದ ಪ್ರತಿಯೊಂದು ಬೆಳೆಗೂ ಉತ್ತಮ ಇಳುವರಿ ಹಾಗೂ ಲಾಭದಾಯಕವಾದ ಬೆಲೆ ಸಿಕ್ಕಲ್ಲಿ ಸಂತಸದಿಂದಿರಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ವ್ಯವಸ್ಥಾಪಕರಾದ ಸಿ. ಅಶ್ವತ್ಥಪ್ಪ ತಿಳಿಸಿದರು.
ತಾಲೂಕಿನ ತೊಂಡೇಬಾವಿ ಹೋಬಳಿಯ ತಿಪ್ಪಗಾನಹಳ್ಳಿ ಪ್ರಗತಿಪರ ರೈತರಾದ ವೆಂಕಟಸ್ವಾಮಿ ಹಾಗೂ ಮುನಿಯಪ್ಪ ಅವರ ಜಮೀನಿನಲ್ಲಿ ಟಾಟಾ ಧಾನ್ಯ ಎಂ ಎಂ 9333 ಮೆಕ್ಕೆಜೋಳ ತಳಿಯ ಧಾನ್ಯ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮುನಿಯಪ್ಪ ಮಾತನಾಡಿ ಪ್ರತಿಯೊಬ್ಬ ರೈತರೂ ತಮ್ಮ ಜಮೀನಿಗೆ ಉತ್ತಮ ತಳಿಯ ಬೀಜವನ್ನು ಬಿತ್ತನೆ ಮಾಡಿ ಅದಕ್ಕೆ ಪೂರಕವಾದ ಗೊಬ್ಬರ ಹಾಗೂ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡಿದಲ್ಲಿ ಇಳುವರಿಯ ಬೆಳೆ ತೆಗೆಯಲು ಸಹಕಾರಿಯಾಗುತ್ತದೆ. ಈ ಭಾಗದ ರೈತರು ಹೆಚ್ಚಿಗೆ ಬೆಳೆಯುವ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಗಬೇಕಾದರೆ ಆರಂಭದಲ್ಲಿ ಗುಣಮಟ್ಟದ ಬೀಜವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಪ್ರತೀ ಎಕರೆ ಭೂಮಿಗೆ 43 ರಿಂದ 45 ಕ್ವಿಂಟಾಲ್ ಜೋಳವನ್ನು ಬೆಳೆಯಲು ಸಹಕಾರಿಯಾಗುತ್ತದೆ. ಇದರಿಂದ ರೈತರ ಬದುಕು ಹಸನಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಧಾನ್ಯ ಸೀಡ್ಸ್ ಕಂಪನಿಯ ಮಣಿಕಂಠ, ಬಾಲಕೃಷ್ಣ, ಆನಂದ್, ಸ್ಥಳೀಯ ರೈತರಾದ, ದೊಡ್ಡಪ್ಪಯ್ಯ, ಕಂಟನಕುಂಟೆ ಅಶ್ವತ್ಥಪ್ಪ, ರಾಜಪ್ಪ, ರಂಗಾಧಮಪ್ಪ, ರಾಮಲಿಂಗಪ್ಪ, ಹನುಮಂತರಾಯಪ್ಪ, ಹನುಮಪ್ಪ, ಮನೋಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post