ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಶತಮಾನದ ಅಪರೂಪದ ಸೂರ್ಯಗ್ರಹಣವನ್ನು ನಗರದ ಜನತೆ ನಿನ್ನೆ ಅತ್ಯಂತ ಸುರಕ್ಷಿತವಾಗಿ ನೋಡಿ ಬಾನಂಗಳದ ಕೌತುಕವನ್ನು ಕಣ್ತುಂಬಿಕೊಂಡರು.
ಸಾರ್ವಜನಿಕರು ಸೂರ್ಯಗ್ರಹಣವನ್ನು ನೋಡಲು ಹಾಗೂ ಆ ಕುರಿತು ತಿಳಿಯಲು ಸಹಕಾರಿಯಾಗುವಂತೆ ಡಾ.ಎಚ್.ನರಸಿಂಹಯ್ಯ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅತ್ಯಾಧುನಿಕ ಟೆಲಿಸ್ಕೋಪ್ ಮತ್ತು ಸನ್ ಫಿಲ್ಟರ್ ಮೂಲಕ ಸೂರ್ಯಗ್ರಹಣ
ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಇದರ ಜೊತೆಗೆ ತಾಲೂಕಿನ ಎಸ್’ಎಸ್’ಇಎ ಸರ್ಕಾರಿ ಪದವಿ ಪೂರ್ವಕಾಲೇಜು, ಕೋಟೆ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕೋಟಾಲದಿನ್ನೆಯ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸೂರು ಗ್ರಾಮದಲ್ಲಿರುವ ಡಾ.ಎಚ್.ಎನ್. ಶಾಲೆಯ ಮಕ್ಕಳಿಗೆ ಸನ್ ಫಿಲ್ಟರ್ ನೀಡಿ ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093








Discussion about this post