ಗೌರಿಬಿದನೂರು: ನಗರಸಭೆ ಸಾರ್ವತ್ರಿಕ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದಕ್ಕಾಗಿ ತಾಲೂಕು ಆಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ನಗರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ನಗರಸಭೆ ಚುನಾವಣೆಯಲ್ಲಿ ಒಟ್ಟು 31 ವಾರ್ಡ್ ಗಳಿಗೆ 50 ಮತಗಟ್ಟೆಗಳನ್ನು ಸಿದ್ಧಗೊಳಿಸಿಕೊಳ್ಳಲಾಗಿದೆ. ಈ ಬಾರಿಯ ಮತದಾರರ ಪಟ್ಟಿಯಲ್ಲಿ 20995 ಮಹಿಳಾ ಮತದಾರರು, 22093 ಪುರುಷ ಮತದಾರರು ಸೇರಿದಂತೆ ಒಟ್ಟು 43088 ಮತದಾರರು ನಗರಸಭೆ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ತಾಲೂಕು ಆಡಳಿತವು ಒಟ್ಟು 31 ವಾರ್ಡಿಗೆ 4 ಮಂದಿ ರಿಟರ್ನಿಂಗ್ ಅಧಿಕಾರಿಗಳನ್ನು ನೇಮಿಸಿದ್ದಾರೆ. 1 ರಿಂದ 8 ನೇ ವಾರ್ಡಿಗೆ ಕುಮಾರಸ್ವಾಮಿ, 9 ರಿಂದ 16 ನೇ ವಾರ್ಡಿಗೆ ತೇಜ್ ಆನಂದರೆಡ್ಡಿ, 17 ರಿಂದ 24 ನೇ ವಾರ್ಡಿಗೆ ನಂಜುಂಡಸ್ವಾಮಿ, 25 ರಿಂದ 31 ನೇ ವಾರ್ಡಿಗೆ ಎನ್. ಮುನಿರಾಜು ರವರನ್ನು ನೇಮಕ ಮಾಡಲಾಗಿದೆ ಎಂದು ತಹಸೀಲ್ದಾರ್ ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೋಮ್ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 130, 1 ಕೆಎಸ್ ಆರ್ ಪಿ, 1 ಡಿರ್ಆ, 3 ಪಿಎಸ್‌ಐ, 1 ಸಿಪಿಐ ಹಾಗೂ 1 ಡಿವೈಎಸ್ ಪಿ ಯನ್ನು ನಿಯೋಜಿಸಲಾಗಿದೆ ಎಂದು ಸಿಪಿಐ ಎಸ್.ರವಿ ತಿಳಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093
Discussion about this post