ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಮಠ ಮಂದಿರಗಳು ಕೇವಲ ಧಾರ್ಮಿಕ ಚಟುವಟಿಕೆಗಳಗಷ್ಟೇ ಸೀಮಿತವಾಗಿರದೆ ಶಿಕ್ಷಣ-ಅರೋಗ್ಯದಂತಹ ಸಮಾಜಮುಖಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಇಲ್ಲಿನ ಚಿಗಟಗೆರೆ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಕರೆ ನೀಡಿದರು.
ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿಯ ಸುಮಾರು 1500 ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಪ್ರಶ್ನೆ ಪತ್ರಿಕೆ ಸಿದ್ದತೆಯ ಪರಿಕರಗಳನ್ನು ಅಲಕಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಟ್ರಸ್ಟ್ ವತಿಯಿಂದ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡುತ್ತಿದರು.
ವಿದ್ಯಾದಾನಕ್ಕಿಂತ ಬೇರೊಂದು ದಾನ ಇಲ್ಲ. ಇದನ್ನು ಅರ್ಥೈಸಿಕೊಂಡರೆ ಮಾತ್ರ ಜನ್ಮ ಸಾರ್ಥಕ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಇಡೀ ತಾಲೂಕಿನ 10ನೆಯ ತರಗತಿಯ ಪರೀಕ್ಷಾ ಫಲಿತಾಂಶ ಜಿಲ್ಲೆಯಲ್ಲೇ ಈ ಬಾರೀ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದೇವೆ. ಸಂಘ ಸಂಸ್ಥೆಗಳ ಹಾಗೂ ಎನ್’ಜಿಓಗಳ ನೆರವಿನಿಂದ ಶೈಕ್ಷಣಿಕವಾಗಿ ಸರ್ಕಾರಿ ಶಾಲೆಗಳನ್ನು ಮುಂಚೂಣಿಗೆ ತರುವ ಉದ್ದೇಶವಿದೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಡಿ.ಜೆ. ಚಂದ್ರಮೋಹನ್ ಮಾತನಾಡಿ, ಮಠ ಮಂದಿರಗಳು ಭಜನೆ, ಉಪನ್ಯಾಸಗಳಿಗೆ ಸೀಮಿತವಾಗಿರದೆ ಸಾಮಾಜಿಕ ಸೇವಾ ಕಾರ್ಯಗಳಿಗೂ ಮುಂದಾಗಬೇಕೆಂದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕ ನಂಜುಂಡಯ್ಯ, ಮುಖಂಡರಾದ ಕುಬೇಂದ್ರರೆಡ್ಡಿ ಡೈರಿ ಸುಬ್ಬರೆಡ್ಡಿ, ರಾಮಕೃಷ್ಣಪ್ಪ, ಕೃಷ್ಣೇಗೌಡ ಇತರರಿದ್ದರು. ಪದ್ಮಪ್ರಭಯ್ಯ ಸ್ವಾಗಿತಿಸಿ, ನವೀನ ನಿರೂಪಿಸಿ ಶ್ರೀನಿವಾಸ್ ವಂದಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post