ಗೌರಿಬಿದನೂರು: ಸಹಕಾರ ಸಂಘವು ಪ್ರಗತಿಯಾಗಬೇಕಾದರೆ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಕಾಲಕಾಲಕ್ಕೆ ಪಿಗ್ಮಿ ಹಾಗೂ ಠೇವಣಿ ವಿಚಾರಗಳನ್ನು ಚರ್ಚಿಸಬೇಕಾಗಿದೆ ಎಂದು ಹಿರಿಯ ನಿರ್ದೇಶಕರಾದ ಬಿ.ಪಿ. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಬಳಿ ಇರುವ ಶ್ರೀಸ್ವಾಮಿ ಶಿವಾನಂದ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ನಡೆದ ತೊಂಡೇಭಾವಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ನ ಸರ್ವಸದಸ್ಯರ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷರಾದ ಬಿ.ಪಿ. ಅಶ್ವತ್ಥನಾರಾಯಣಗೌಡ ಮಾತನಾಡಿ, ಸಂಘವು ಈ ಭಾಗದ ರೈತರ ಹಾಗೂ ಬಡವರ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ. ಆಪತ್ಕಾಲದಲ್ಲಿ ಸಾಲದ ಸೌಲಭ್ಯ ನೀಡುವ ಮೂಲಕ ಅವರ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಜೆ. ಕಾಂತರಾಜು, ಗ್ರಾಮೀಣ ಭಾಗದಲ್ಲಿ ಆರಂಭವಾಗಿರುವ ಸಹಕಾರ ಸಂಘದಿಂದ ರೈತರಿಗೆ, ಬಡವರಿಗೆ ಹಾಗೂ ವರ್ತಕರಿಗೆ ಅನುಕೂಲವಾಗುತ್ತಿದೆ. ಎಲ್ಲಾ ನಿರ್ದೇಶಕರು ಒಮ್ಮತದಿಂದ ಕಾರ್ಯನಿರ್ವಹಿಸಿ ಹೆಚ್ಚಿನ ಠೇವಣಿಯನ್ನು ಸಂಘದಲ್ಲಿ ಹೂಡಿಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕಿದೆ. ಶೀಘ್ರದಲ್ಲೇ ಇ- ಸ್ಟಾಂಪಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ.ಎಲ್. ವಿ ರಾಜು ಅವರು ಸಂಘದ ನಡವಳಿಕೆಗಳು ಹಾಗೂ ವಾರ್ಷಿಕ ಖರ್ಚು ವೆಚ್ಚಗಳನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ರಾಜ್ಯ ಸಹಕಾರ ಸಂಘದ ಜಂಟಿ ಉಪನೋಂದಣಾಧಿಕಾರಿ ಎಂ.ಡಿ. ನರಸಿಂಹಮೂರ್ತಿ, ನಿರ್ದೇಶಕರಾದ ಪಿ.ಎನ್. ಶಿವಶಂಕರರೆಡ್ಡಿ, ಕೃಷ್ಣಪ್ಪ, ನಗೀನಾ ಬೇಗಂ, ವಿಜಯ್ ಕುಮಾರ್, ಚಿಕ್ಕಸಿದ್ದಪ್ಪ, ಎಂ.ಡಿ. ವಿಜಯಲಕ್ಷ್ಮಿ, ಸೈಯದ್ ಅಬ್ಬಾಸ್, ಕೆ.ವಿ. ಶ್ರೀನಿವಾಸ್, ಕೆ.ಎಲ್.ವಿ. ರಾಜು, ಟಿ. ಗೋವಿಂದಪ್ಪ, ಟಿ.ಎನ್. ನಾಗರಾಜು, ಬಿ.ಎಂ. ಮೈಲಾರಪ್ಪ, ಆರ್.ಎನ್. ವೆಂಕಟೇಶರೆಡ್ಡಿ, ಹರಿಬಾಬು, ಮೀರ್ ಜೈನ್ ಉಲ್ಲಾಬುದಿನ್, ಬಿ.ಎನ್. ರಂಗಪ್ಪ, ಸಂಘದ ಸಿಬ್ಬಂಧಿಗಳಾದ ಸದ್ದಾಂ ಹುಸೇನ್, ಅಶೋಕ್, ನಿತಿನ್ ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post