ಮದ್ದೂರು: ಕೆಲವು ದಿನಗಳಿಂದ ಮಳೆರಾಯನ ಆರ್ಭಟಕ್ಕೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಆದರೆ ತಾಲ್ಲೂಕು ಕಚೇರಿಯಲ್ಲಿ ಜನರೇಟರ್ ಸೌಲಭ್ಯವಿದ್ದರು ಅದನ್ನು ಬಳಸಿಕೊಳ್ಳಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಾಲ್ಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಕಳೆದ ದಿನಗಳಿಂದ ಪಡಿತರ ಚೀಟಿಯನ್ನು ವಿತರಿಸಲಾಗುತ್ತಿದ್ದು ಮೊನ್ನೆಯಿಂದ ವಿದ್ಯುತ್ ಸಮಸ್ಯೆಯಿಂದಾಗಿ ನೀಡುತ್ತಿಲ್ಲ ಎಂದು ಕೌಡ್ಲೆ ಭಾಗದ ವ್ಯಕ್ತಿಯೊಬ್ಬರು ತಿಳಿಸಿದರು.
ಬೆಳಿಗ್ಗೆ 9ಗಂಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪಡಿತರ ಚೀಟಿ ಪಡೆಯಲು ಕೆಲಸ ಕಾರ್ಯಗಳನ್ನು ಬಿಟ್ಟು ಬಂದಿದ್ದೇನೆ ಆದರೆ ವಿದ್ಯುತ್ ಸಮಸ್ಯೆಯಿಂದಾಗಿ ನೀಡುತ್ತಿಲ್ಲ ಎಂದರು ಯು.ಪಿ.ಎಸ್ ಸೌಲಭ್ಯವಿದ್ದರು ಅದು ಸಹ ರಿಪೇರಿಯಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸರ್ಕಾರದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಜನರೇಟರ್ ಒದಗಿಸಿದ್ದರು ಅದನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಡೆಸರುವುದು ಖಂಡನೀಯ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಚೇರಿಯ ಹಲವು ಶಾಖೆಗಳಲ್ಲಿ ಇದೆ ಸಮಸ್ಯೆ ತಲೆದೋರಿದೆ
ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಬಳಿ ತಿಳಿಸಿದಾಗ ಜನರೇಟರ್ ರನ್ನು ಬಳಸಿಕೊಳ್ಳಲು ಒಂದು ಗಂಟೆಗೆ 40ಲೀಟರ್ ಡೀಸೆಲ್ ಬೇಕಾಗುತ್ತದೆ ಆದರೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಷ್ಟೊಂದು ಹಣವನ್ನು ನೀಡುತ್ತಿಲ್ಲ ಎಂದು ಹೆಸರನ್ನು ಹೇಳದ ಅಧಿಕಾರಿಯೊಬ್ಬರು ತಿಳಿಸಿದರು.
ಇನ್ನು ಮುಂದೆ ಇದೆ ರೀತಿ ಮುಂದುವರಿದಲ್ಲಿ ತಾಲ್ಲೂಕು ಕಚೇರಿಯಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ಬೋರ ನಾಯ್ಕ್, ಮದ್ದೂರು
Discussion about this post