ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರು ಹಾಗೂ ಪತ್ರಿಕೆ ಹಂಚುವವರು ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ ಹೇಳಿದರು.
ಕೊರೋನಾ ವೈರಸ್ ಹರಡದಂತೆ ತಡೆಯುವ ಮುಂಜಾಗ್ರತಾ ಕ್ರಮದ ಭಾಗವಾಗಿ ನಗರಸಭೆ ವತಿಯಿಂದ ಪತ್ರಿಕಾ ವಿತರಕರಿಗೆ ಗ್ಲೌಸ್ ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ಇಂತಹ ತುರ್ತು ಪರಿಸ್ಥಿತಿಯಲ್ಲೂ ಸಹ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಬೇಕಾದ ಅನಿವಾರ್ಯ ಕಾರ್ಯವನ್ನು ನೀವೆಲ್ಲರೂ ಮಾಡುತ್ತಿರುವುದು ಶ್ಲಾಘನೀಯ. ಆದರೆ, ಇದೇ ಸಂದರ್ಭದಲ್ಲಿ ವೈರಸ್ ಹರಡದಂತೆ ನೀವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾದ್ದು ಅಗತ್ಯ. ಪತ್ರಿಕೆ ವಿತರಣೆ ಮಾಡುವ ವೇಳೆ ಮಾಸ್ಕ್ ಹಾಗೂ ಗ್ಲೌಸ್ ಧರಿಸಿಯೇ ಓಡಾಡಿ. ಆಗಾಗ್ಗೆ ಕೈಗಳಲ್ಲು ಸ್ವಚ್ಛವಾಗಿ ತೊಳೆಯುತ್ತಿರಿ. ಕೈ ಸ್ವಚ್ಛಗೊಳಿಸಲು ಸ್ಯಾನಿಟೈಸರ್ ಮಾತ್ರ ಬಳಕೆ ಎಂದೇನೂ ಇಲ್ಲ. ಸಾಬೂನಿನಿಂದಲೂ ಸಹ 20 ಸೆಕೆಂಡ್’ಗಳ ಕಾಲ ಸ್ವಚ್ಛವಾಗಿ ತೊಳದರೆ ಸಾಕು ಎಂದು ಸಲಹೆ ನೀಡಿದರು.
ನಗರಸಭೆ ಆಯುಕ್ತ ಮನೋಹರ್ ಮಾತನಾಡಿ, ಲಾಕ್ ಡೌನ್ ಘೋಷಣೆ ಮಾಡಿದ್ದರೂ ಅಗತ್ಯ ಸೇವೆಗಳ ಅಡಿಯಲ್ಲಿ ಪತ್ರಿಕಾ ವಿತರಕರು ತಮ್ಮ ಕರ್ತವ್ಯ ಮಾಡುತ್ತಿರುವುದು ಶ್ಲಾಘನೀಯ. ಮನೆ ಮನೆಗೆ ತೆರಳಿ ಪತ್ರಿಕೆ ವಿತರಿಸುವ ಇಂತಹ ಪರಿಸ್ಥಿತಿಯಲ್ಲಿ ನೀವುಗಳು ಆರೋಗ್ಯ ಇಲಾಖೆ ಹಾಗೂ ನಗರಸಭೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದರು.
ಡಿವೈಎಸ್’ಪಿ ಸುಧಾಕರ ಎಸ್ ನಾಯ್ಕ್, ಪರಿಸರ ಇಂಜಿನೀಯರ್ ರುದ್ರೇಗೌಡ, ಆರ್’ಸಿಎಚ್ ಡಾ. ನಾಗರಾಜ ನಾಯ್ಕ್, ಆರೋಗ್ಯ ನಿರೀಕ್ಷಕ ನೀಲೇಶ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post