ಪಣಜಿ: ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಮೋದ್ ಸಾವಂತ್, ಇಂದು ವಿಶ್ವಾಸ ಮತ ಗೆಲ್ಲುವ ಮೂಲಕ ಅಧಿಕಾರನ್ನು ಬಿಜೆಪಿ ಬಳಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಧ್ಯರಾತ್ರಿ 2 ಗಂಟೆಗೆ ಗೋವಾದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಾವಂತ್ ಇಂದು ವಿಶ್ವಾಸಮತ ಗೆದ್ದಿರುವುದು, ಅಧಿಕಾರ ಹಿಡಿಯಲು ಯತ್ನಿಸಿದ್ದ ಕಾಂಗ್ರೆಸ್’ಗೆ ತೀವ್ರ ಮುಖಭಂಗವಾಗಿದೆ.
ಸಾವಂತ್ ಅವರ ಸರ್ಕಾರದ ಪರ 20 ಶಾಸಕರು ಮತ ಚಲಾಯಿಸಿದ್ದು, ಸರ್ಕಾರ ಭದ್ರಗೊಂಡಿದೆ. ಗೋವಾ ವಿಧಾನಸಭೆಯಲ್ಲಿ ಬಿಜೆಪಿ 12 ಶಾಸಕರನ್ನು ಹೊಂದಿದ್ದು, ಜೆಎಫ್‌ಪಿಯ ಮೂವರು, ಎಂಜಿಪಿಯ ಮೂವರು, ಮೂವರು ಪಕ್ಷೇತರ ಸದಸ್ಯರನ್ನು ಒಳಗೊಂಡಂತೆ ಒಟ್ಟಾರೆ 21 ಸದಸ್ಯ ಬಲ ಹೊಂದಿದೆ.
ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿಯು ಸ್ಪೀಕರ್ ಹೊರತುಪಡಿಸಿ 20 ಮಂದಿಯ ಬೆಂಬಲದೊಂದಿಗೆ ಸರ್ಕಾರ ಉಳಿಸಿಕೊಂಡಿದ್ದರೆ, ಕಾಂಗ್ರೆಸ್ ಪರವಾಗಿ 15 ಮತಗಳು ಮಾತ್ರ ಚಲಾವಣೆಯಾದವು.
Discussion about this post