ಕಲ್ಪ ಮೀಡಿಯಾ ಹೌಸ್ | ಗೋವಾ |
ವಿಶ್ವದಾದ್ಯಂತ ಖ್ಯಾತಿಗಳಿಸಿರುವ ಕಾಂತಾರ Kantara ಚಿತ್ರದ ಮುಡಿಗೆ ಈಗ ಮತ್ತೊಂದು ಗರಿ ಮೂಡಿದ್ದು, ಈ ಕುರಿತಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ Goa International Film Festival ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ಕಾಂತಾರ ಪಾತ್ರವಾಗಿದೆ. ತೀರ್ಪುಗಾರರ ಗಮನ ಸೆಳೆಯುವುದು ಪ್ರತಿ ವರ್ಷವೂ ವಿಶೇಷ.
ಈ ಬಾರಿ ಆ ಗೌರವ ನಿರ್ದೇಶಕ ರಿಷಬ್ ಶೆಟ್ಟಿ ಪಾಲಾಗಿದೆ. ಕಾಂತಾರ ಸಿನಿಮಾದಲ್ಲಿ ಅದ್ಭುತ ನಟನೆಗೆ ಹಾಗೂ ಅದ್ಭುತವಾಗಿ ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ.
Also read: ಚೀನಾ ಮಕ್ಕಳಲ್ಲಿ ಉಸಿರಾಟದ ಕಾಯಿಲೆ ಉಲ್ಬಣ | ಬೆಂಗಳೂರು ಸೇರಿ ದೇಶದ ಪ್ರಮುಖ ಕಡೆ ಹೈಅಲರ್ಟ್
ಈ ಮೂಲಕ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಈ ಪ್ರಶಸ್ತಿ ಪಡೆದ ಮೊದಲ ಚಿತ್ರ ಎಂಬ ದಾಖಲೆಯನ್ನು ಕಾಂತಾರ ನಿರ್ಮಿಸಿದ್ದು, ಚಿತ್ರ ಬಿಡುಗಡೆಗೊಂಡು ಒಂದು ವರ್ಷ ಕಂಡರೂ ಕಾಂತಾರ ಹವಾ ಕಡಿಮೆಯಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಕಾಂತಾರ ಯಶಸ್ಸಿನ ಬೆನ್ನಲ್ಲೇ ಕಾಂತಾರ ಅಧ್ಯಾಯ 1ಕ್ಕೆ ಮುಹೂರ್ತವೂ ಆಗಿದ್ದು, ಫಸ್ಟ್ ಲುಕ್ ದೇಶದ ಗಮನ ಸೆಳೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post