ಕಲ್ಪ ಮೀಡಿಯಾ ಹೌಸ್ | ಗೋವಾ |
ಲೆಜೆಂಡ್ಸ್ ಪ್ರೋ T20 ಲೀಗ್ #Legends Pro T20 League ತನ್ನ ಮುಂದಿನ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಬಾರಿ ಲೀಗ್‌ಗೆ ದಿನೇಶ್ ಕಾರ್ತಿಕ್, #Dinesh Karthik ಶಾನ್ ಮಾರ್ಶ್, #Shaun Marsh ಅಮಿತ್ ಮಿಶ್ರಾ, ವಿನಯ್ ಕುಮಾರ್ ಮತ್ತು ಇಂಗ್ಲೆಂಡ್‌ನ ಪ್ರಸಿದ್ಧ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಸೇರಿಕೊಂಡಿದ್ದು, ಗೋವಾದಲ್ಲಿ ನಡೆಯಲಿರುವ ಈ ಲೀಗ್‌ನಲ್ಲಿ ಅವರು ಭಾಗವಹಿಸಲಿದ್ದಾರೆ.
ಭಾರತದ ಪ್ರಸಿದ್ಧ ಫಿನಿಷರ್‌ಗಳಲ್ಲೊಬ್ಬರಾದ ದಿನೇಶ್ ಕಾರ್ತಿಕ್ 2018ರ ನಿಧಾಹಾಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ ನೆನಪಿನ ಪ್ರದರ್ಶನಕ್ಕಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. 2024ರಲ್ಲಿ ತಮ್ಮ T20 ವೃತ್ತಿಜೀವನವನ್ನು ಮುಗಿಸಿದ ಅವರು ಮತ್ತೆ ಮೈದಾನಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ.

ಭಾರತದ ಪ್ರೀಮಿಯರ್ T20 ಲೀಗ್‌ನ ಮೊದಲ ‘ಆರೇಂಜ್ ಕ್ಯಾಪ್’ ವಿಜೇತರಾಗಿರುವ ಶಾನ್ ಮಾರ್ಶ್ ಹಲವು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಮರಳಲಿದ್ದಾರೆ. ಮಾರ್ಶ್ ಮಾತನಾಡಿ “ಬಹಳ ವರ್ಷಗಳ ನಂತರ ಭಾರತಕ್ಕೆ ಮರಳುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಲೆಜೆಂಡ್ಸ್ ಪ್ರೋ T20 ಲೀಗ್ ಮತ್ತೆ ಇಲ್ಲಿ ಆಡಲು ಅವಕಾಶ ನೀಡಿರುವುದು ವಿಶೇಷ’ ಎಂದಿದ್ದಾರೆ.

ವಿನಯ್ ಕುಮಾರ್ ಕೂಡ ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದು“ಲೆಜೆಂಡ್ಸ್ ಪ್ರೋ T20 ಲೀಗ್‌ನ ಭಾಗವಾಗಿರುವುದು ನನಗೆ ನಿಜವಾದ ಸಂತೋಷ” ಎಂದಿದ್ದಾರೆ.
ಇಂಗ್ಲೆಂಡ್‌ನ ಅತ್ಯಂತ ಪ್ರೀತಿಸಲ್ಪಡುವ ಎಡಗೈ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಮಾಂಟಿ ಪನೇಸರ್ ಕೂಡ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, “ಭಾರತದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ. ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಮತ್ತೆ ಮೈದಾನಕ್ಕಿಳಿಯಲು ನಾನು ಕಾತರರಾಗಿದ್ದೇನೆ ಎಂದಿದ್ದಾರೆ.
ಲೆಜೆಂಡ್ಸ್ ಪ್ರೋ T20 ಲೀಗ್‌ನ ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದ ಹೊಸ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆರವೇರುವಂತೆ ಯೋಜಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post