ಕಲ್ಪ ಮೀಡಿಯಾ ಹೌಸ್ | ಯಶವಂತಪುರ/ಹುಬ್ಬಳ್ಳಿ |
ಮುಂಬರುವ ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ಮುಜಫರ್ಪುರ-ಹುಬ್ಬಳ್ಳಿ ಹಾಗೂ ದಾನಾಪುರ-ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಎರಡೂ ಮಾರ್ಗದಲ್ಲಿ ಹಬ್ಬಗಳಿಗಾಗಿ ವಿಶೇಷ ರೈಲು ಸಂಚರಿಸಲಿದೆ ಎಂದು ತಿಳಿಸಿದೆ. ಈ ರೈಲುಗಳ ವಿವರಗಳು ಹೀಗಿವೆ.
1. 05543 ಸಂಖ್ಯೆಯ ಮುಜಫರ್ಪುರ-ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 10 ರಿಂದ ನವೆಂಬರ್ 14ರವರೆಗೆ ಪ್ರತಿ ಶುಕ್ರವಾರ 12:45 ಗಂಟೆಗೆ ಮುಜಫರ್ಪುರದಿಂದ ಹೊರಟು ಸೋಮವಾರ ಮಧ್ಯಾಹ್ನ 12:20 ಗಂಟೆಗೆ ಹುಬ್ಬಳ್ಳಿ ತಲುಪುತ್ತದೆ.
ಮರಳಿ ಬರುವಾಗ, ಈ ರೈಲು (05544) ಅಕ್ಟೋಬರ್14 ರಿಂದ ನವೆಂಬರ್ 18 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 09:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಶುಕ್ರವಾರ ಬೆಳಿಗ್ಗೆ 05:00 ಗಂಟೆಗೆ ಮುಜಫರ್ಪುರ ತಲುಪುತ್ತದೆ. ಈ ರೈಲು ಒಟ್ಟು ಆರು ಟ್ರಿಪ್’ಗಳು ಸಂಚರಿಸಲಿದೆ.

ಈ ರೈಲುಗಳು ಮೋತಿಪುರ, ಚಕಿಯಾ, ಬಾಪುಧಾಮ್ ಮೋತಿಹಾರಿ, ಸಗೌಲಿ ಜಂ., ಬೆತ್ತಿಯಾ, ನರ್ಕಟಿಯಾಗಂಜ್ ಜಂ., ಬಗಹಾ, ಕಪ್ತಾನಗಂಜ್ ಜಂ., ಗೋರಖ್ಪುರ ಜಂ., ಗೋಂಡಾ ಜಂ., ಐಶ್ಬಾಗ್, ಕಾನ್ಪುರ ಸೆಂಟ್ರಲ್, ಓರೈ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ, ಬೀನಾ ಜಂ., ಭೋಪಾಲ್ ಜಂ., ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾಷಾರ್, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್ ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಯಲಹಂಕ ಜಂ., ತುಮಕೂರು, ಅರಸೀಕೆರೆ ಜಂ., ಬೀರೂರು ಜಂ., ಚಿಕ್ಕಜಾಜೂರು ಜಂ., ದಾವಣಗೆರೆ, ರಾಣೇಬೆನ್ನೂರು, ಮತ್ತು ಎಸ್’ಎಂಎಂ ಹಾವೇರಿ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಇರಲಿದೆ.
2. 03261 ಸಂಖ್ಯೆಯ ದಾನಾಪುರ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 11, 2025 ರಿಂದ ಡಿಸೆಂಬರ್ 27, 2025 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10:00 ಗಂಟೆಗೆ ದಾನಾಪುರದಿಂದ ಹೊರಡುತ್ತದೆ ಮತ್ತು ಮಂಗಳವಾರ ರಾತ್ರಿ 09:30 ಗಂಟೆಗೆ ಯಶವಂತಪುರ ತಲುಪುತ್ತದೆ.
ಮರಳಿ ಬರುವಾಗ, ಈ ರೈಲು (03262) ಅಕ್ಟೋಬರ್ 14, 2025 ರಿಂದ ಡಿಸೆಂಬರ್ 30, 2025 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ ಮತ್ತು ಗುರುವಾರ ಮಧ್ಯಾಹ್ನ 12:00 ಗಂಟೆಗೆ ದಾನಾಪುರ ತಲುಪುತ್ತದೆ. ಈ ರೈಲು ಪ್ರತಿ ದಿಕ್ಕಿನಲ್ಲಿಯೂ ಒಟ್ಟು ಹನ್ನೆರಡು ಟ್ರಿಪ್‌ಗಳು ಇರಲಿವೆ.

ಅರಾ ಜಂ., ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂ., ಪ್ರಯಾಗ್‌ರಾಜ್ ಛೆವೋಕಿ ಜಂ., ಮಾಣಿಕ್‌ಪುರ ಜಂ., ಸತ್ನಾ, ಕಟ್ನಿ ಜಂ., ಜಬಲ್‌ಪುರ, ನರಸಿಂಗ್‌ಪುರ, ಪಿಪರಿಯಾ, ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್‌ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿರಲಿದೆ.
ಎಷ್ಟು ಬೋಗಿಗಳು ಇರಲಿವೆ?
ಈ ರೈಲು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 12 ಸ್ಲೀಪರ್ ವರ್ಗ, 4 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಇರಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post